ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿಯನ್ನು ಡೊಮಿನಿಕಾ ಕೋರ್ಟ್ ವಜಾಗೊಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ಪ್ರವೇಶಿಸಿದ ವಲಸಿಗ ಎಂದು ಡೊಮಿನಿಕಾ ಸರ್ಕಾರ ಹೇಳಿದೆ.
ಆತನ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂಪಾಯಿ ವಂಚಿಸಿದ್ದ ಗುಜರಾತ್ ವಜ್ರದ ಉದ್ಯಮಿಯಾಗಿರುವ ಮೆಹುಲ್ ಚೋಕ್ಸಿ ಭಾರತಕ್ಕೆ ಕರೆ ತರುವ ಪ್ರಯತ್ನಕ್ಕೆ ಬಲ ಬಂದಿದೆ ಎನ್ನಲಾಗಿದೆ.