ದೇಶದ ಅತಿ ದೊಡ್ಡ ಬಜೆಟ್ ವಿಮಾನಯಾನ ಸೇವಾದಾರ ಇಂಡಿಗೋ ಒಮಿಕ್ರಾನ್ ಕಾಟದ ನಡುವೆ ತನ್ನೆಲ್ಲಾ ಬುಕಿಂಗ್‌ಗಳ ಮರು-ನಿಗದಿ ಮಾಡಿಕೊಳ್ಳಲು ಅವಕಾಶ ಕೊಡುವುದಾಗಿ ತಿಳಿಸಿದೆ.
ಜನವರಿ 3ರಿಂದ ಮಾರ್ಚ್ 31ರ ನಡುವೆ ಬುಕಿಂಗ್ ಮಾಡಲಾಗಿರುವ ಫ್ಲೈಟ್ ಟಿಕೆಟ್‌ಗಳನ್ನು ಹೆಚ್ಚುವರಿ ಶುಲ್ಕ ಪಾವತಿ ಮಾಡುವ ಮೂಲಕ ಬೇರೊಂದು ದಿನಾಂಕಕ್ಕೆ ಬುಕ್ ಮಾಡಿಕೊಳ್ಳಲು ಇಂಡಿಗೋ ಅವಕಾಶ ನೀಡುತ್ತದೆ.
ಸೈನಾ ವಿರುದ್ಧ ಅವಹೇಳನಕಾರಿ ಕಮೆಂಟ್…! ಮೋದಿ ಪರ ಟ್ವೀಟ್ ಮಾಡಿದ್ದಕ್ಕೆ ಮುಗಿಬಿದ್ರಾ ನಟ ಸಿದ್ಧಾರ್ಥ್…? ಇಲ್ಲಿದೆ ಡಿಟೇಲ್ಸ್
ಆದರೆ ಒಮಿಕ್ರಾನ್ ಕಾಟದಿಂದ ಎಲ್ಲವೂ ಅಯೋಮಯವಾಗಿರುವ ಈ ಕಾಲಘಟ್ಟದಲ್ಲಿ, ಟಿಕೆಟ್ ಬುಕಿಂಗ್‌ನ ಮರು-ನಿಗದಿ ಮಾಡಲು ಹೆಚ್ಚುವರಿ ಶುಲ್ಕವನ್ನು ಇಂಡಿಗೋ ಏರ್ ತೆಗೆದುಹಾಕಿದೆ. ಮಾರ್ಚ್ 31, 2022 ರ ವರೆಗೂ ಹಾರಲಿರುವ ಫ್ಲೈಟ್‌ಗಳಿಗೆ ಜನವರಿ 31ರ ವರೆಗೂ ಮಾಡಲಾಗುವ ಬುಕಿಂಗ್‌ಗಳಿಗೆ ಈ ಅವಕಾಶ ನೀಡಲಾಗಿದೆ.
ಇದೇ ವೇಳೆ, ಬೇಡಿಕೆ ಕಡಿಮೆಯಾದಲ್ಲಿ ಕೆಲವೊಂದು ವಿಮಾನಗಳ ಸೇವೆಯನ್ನು ರದ್ದು ಮಾಡುವುದಾಗಿ ಇಂಡಿಗೋ ತಿಳಿಸಿದೆ. “ಅದಾಗಲೇ ನಿಗದಿ ಮಾಡಲಾಗಿರುವ 20%ನಷ್ಟು ಫ್ಲೈಟ್‌ಗಳ ಸೇವೆಯನ್ನು ರದ್ದು ಮಾಡುವ ನಿರೀಕ್ಷೆ ಇದೆ. ಸಾಧ್ಯಾವಾದಾಗೆಲ್ಲಾ ಫ್ಲೈಟ್‌ಗಳನ್ನು 72 ಗಂಟೆಗಳ ಮುನ್ನ ರದ್ದು ಮಾಡಿ ಗ್ರಾಹಕರನ್ನು ಲಭ್ಯವಿರುವ ಮುಂದಿನ ಫ್ಲೈಟ್‌ನತ್ತ ಕಳುಹಿಸಲಾಗುವುದು ಹಾಗೂ ನಮ್ಮ ಜಾಲತಾಣದಿಂದ ಬೇರೊಂದು ಪ್ಲಾನ್ ಮಾಡಲು ಅನುವು ಮಾಡಿಕೊಡಲಾಗುವುದು,” ಎಂದು ವಿಮಾನಯಾನ ಸಂಸ್ಥೆಯ ಪೋರ್ಟಲ್ ತಿಳಿಸಿದೆ.
ಕೋವಿಡ್ ನಿರ್ಬಂಧ ಹಾಗೂ ವಾತಾವರಣದ ಕಾರಣದಿಂದ ಫ್ಲೈಟ್‌ಗಳು ರದ್ದಾದ ಪಕ್ಷದಲ್ಲಿ ಬೇರೊಂದು ಪ್ಲಾನ್ (ಪ್ಲಾನ್ ಬಿ) ಮಾಡಿಕೊಳ್ಳಲು ಅಥವಾ ಟಿಕೆಟ್ ರದ್ದು ಮಾಡಿ ರೀಫಂಡ್ ಮಾಡಲು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಅನುವು ಮಾಡಿಕೊಡಲಾಗುವುದು ಎಂದು ಇಂಡಿಗೋ ತಿಳಿಸಿದೆ.