ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ.
ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, ಧ್ಯಾನವು, ಆಂತರ್ಯದಲ್ಲಿನ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಹಾರ್ಮೋನುಗಳ ಅಸಮತೋಲನದಿಂದ ಖಿನ್ನತೆಗೊಳಗಾಗಿದ್ದರೆ ಇದರಿಂದ ಹೊರಬರಲು ಇರುವ ಮಾರ್ಗವೇ ಯೋಗಾಭ್ಯಾಸ. ಮಾನಸಿಕ ಒತ್ತಡಗಳಿಂದ ಹೊರಬರಲು ಯೋಗಕ್ಕಿದೆ ಸಾಮರ್ಥ್ಯ.
ಯೋಗ ಕೇವಲ ಸೀಮಿತವಾದದ್ದಲ್ಲ. ಪ್ರತಿಯೊಬ್ಬರ ಜೀವನಕ್ಕೂ ಅವಶ್ಯಕ. ಎಲ್ಲರೂ ಪ್ರತಿನಿತ್ಯದ ಜೀವನಶೈಲಿಯಲ್ಲಿ ಯೋಗಾಸನವನ್ನು ಅಭ್ಯಾಸವಾಗಿ ಇಟ್ಟುಕೊಳ್ಳಲೇಬೇಕು.