ಜಿಮ್‌ಗೆ ಹೋಗುವುದು ದುಬಾರಿ ಕೆಲಸವೆಂದು ನಿಮಗೆ ಅನಿಸಿದರೆ, ನಿಮ್ಮದೇ ಸಾಮರ್ಥ್ಯದಲ್ಲಿ ಬೆವರಿಳಿಸಿ, ದೇಹವನ್ನು ಹಗುರಾಗಿಸಲು ನೆರವಾಗುವ ಒಂದಿಷ್ಟು ಸರಳ ವ್ಯಾಯಾಮಗಳು ಇಂತಿವೆ:
ಕ್ಯಾಲರಿಗಳನ್ನು ಕಡಿಮೆಗೊಳಿಸಿ, ತೂಕ ಇಳಿಸಲು ಓಡುವುದು ಉತ್ತಮ ವ್ಯಾಯಾಮ. ಇದಕ್ಕೆ ನಿಮಗೆ ಬೇಕಿರುವುದು ಸೂಕ್ತವಾದ ಒಂದು ಜೊತೆ ಶೂಗಳು ಅಷ್ಟೇ. ನಿಮ್ಮ ದೇಹದ ತೂಕದನುಸಾರ ಪ್ರತಿ ಮೈಲಿ ಓಟದಿಂದ ಸುಮಾರು 100 ಕ್ಯಾಲೊರಿಯಷ್ಟು ಸುಟ್ಟುಹಾಕಬಹುದಾಗಿದೆ. ನಿಮ್ಮ ತೂಕ ಹೆಚ್ಚಿದ್ದಷ್ಟು ನೀವು ಓಡುವಾಗ ಸುಟ್ಟುಹೋಗುವ ಕ್ಯಾಲೊರಿಗಳು ಹೆಚ್ಚಿರುತ್ತವೆ.
ಸೈಕ್ಲಿಂಗ್
ನಿಮ್ಮ ಕೆಲಸದ ಜಾಗದಿಂದ ಮನೆ ಕೆಲವೇ ಕಿಮೀ ದೂರದಲ್ಲಿದ್ದರೆ ಸೈಕ್ಲಿಂಗ್ ನಿಮಗೊಂದು ಒಳ್ಳೆಯ ವರ್ಕ್‌ಔಟ್ ಆಯ್ಕೆಯಾಗಲಿದೆ. ಮೋಟರ್‌ಚಾಲಿತ ವಾಹನಕ್ಕೆ ಬಳಸುವ ಇಂಧನದ ದುಡ್ಡು ಉಳಿತಾಯವಾಗುವುದರೊಂದಿಗೆ, ನಿಮ್ಮ ದೇಹವನ್ನು ಉಲ್ಲಾಸಮಯವಾಗಿ ಇಡಲು ಸೈಕ್ಲಿಂಗ್ ನೆರವಾಗಲಿದೆ.
ವಿಕ್ರಮ ಯೋಗ
ನಿಮ್ಮ ದೇಹದಿಂದ ಚೆನ್ನಾಗಿ ಬೆವರಿಳಿಸಲು ಈ ಯೋಗ ಬಹಳ ನೆರವಾಗಲಿದೆ. 40 ಡಿಗ್ರಿಯಷ್ಟು ಒಳಾಂಗಣ ತಾಪಮಾನವಿರುವ ಜಾಗದಲ್ಲಿ ಯೋಗದ ಸರಳ ಆಸನಗಳನ್ನು ಮಾಡಿದರೆ ಸಾಕು. 90 ನಿಮಿಷಗಳ ಇಂಥ ಒಂದು ಸೆಶನ್‌ನಲ್ಲಿ ಪುರುಷರು 460 ಕೆಲೊರಿ ಸುಟ್ಟು ಹಾಕಬಹುದಾದರೆ ಮಹಿಳೆಯರು 330 ಕೆಲೊರಿ ಸುಟ್ಟ ಹಾಕಬಹುದು. ಈ ವೇಳೆ ಚೆನ್ನಾಗಿ ನೀರು ಕುಡಿಯುವುದನ್ನು ಖಾತ್ರಿ ಮಾಡಿಕೊಳ್ಳಿ ಅಷ್ಟೇ.
ಬೆಟ್ಟ ಹತ್ತುವುದು
ನಗರದ ಜಂಜಾಟದಿಂದ ಒಂದಷ್ಟು ಕಾಲ ತಪ್ಪಿಸಿಕೊಂಡು ನೆಮ್ಮದಿ ಅರಸಿ ಹೋಗಲು ಬೆಟ್ಟ ಹತ್ತುವುದು (ಹೈಕಿಂಗ್) ಭಾರೀ ಒಳ್ಳೆಯ ಆಯ್ಕೆ. ಮೇಲ್ಮುಖವಾಗಿ ನಿಮ್ಮ ದೇಹವನ್ನು ಹೊತ್ತೊಯ್ಯುವಾಗ ಭಾರೀ ಪ್ರಮಾಣದಲ್ಲಿ ಬೆವರು ಬಂದು ನಿಮ್ಮ ದೇಹದೊಳಗಿನ ಟಾಕ್ಸಿನ್‌ಗಳ ಹೊರಬರುವುದರೊಂದಿಗೆ ಒಂದು ಗಂಟೆ ಹೈಕಿಂಗ್ ಮಾಡಿದಲ್ಲಿ 438ರಷ್ಟು ಕೆಲೊರಿಗಳು ಸುಟ್ಟು ಹೋಗಲಿವೆ.
ಈಜು
ಅದಾಗಲೇ ನೀರಿನಲ್ಲಿ ಇರುವ ಕಾರಣ ಈಜಿದಾಗ ಬೆವರು ಬರುವುದು ನಿಮಗೆ ಗೊತ್ತಾಗುವುದಿಲ್ಲ. ಇಡೀ ದೇಹಕ್ಕೆ ಒಂದೇ ಬಾರಿಗೆ ವರ್ಕ್‌ಔಟ್ ಮಾಡಿಸುವ ಈಜು ಪ್ರತಿ ಗಂಟೆಗೆ 580-730 ಕೆಲೊರಿಗಳನ್ನು ಸುಟ್ಟುಹಾಕಲು ನೆರವಾಗುತ್ತದೆ.
ನಡಿಗೆ
ಅತ್ಯಂತ ಸುರಕ್ಷಿತವಾದ ವ್ಯಾಯಾಮವಾದ ನಡಿಗೆಯನ್ನು ದೇಹದ ಅಂಗಗಳು ಸರಿಯಾಗಿ ಕೆಲಸ ಮಾಡುವ ಪ್ರತಿಯೊಬ್ಬರೂ ಮಾಡಬಲ್ಲರು. ವೇಗವಾಗಿ ನಡೆಯುವುದರಿಂದ ನೀವು ಗಂಟೆಗೆ 370-460 ಕೆಲೊರಿಷ್ಟು ಸುಟ್ಟುಹಾಕಬಹುದಾಗಿದೆ. ನಡೆಯುತ್ತಾ ಹಾಗೇ ಒಂದಷ್ಟು ಗುಡ್ಡಗಾಡು ಪ್ರದೇಶಗಳನ್ನು ಹಾಯ್ದು ಬರುವುದು ಅಥವಾ ಕೈಗಳನ್ನು ಅಲ್ಲಾಡಿಸುತ್ತಾ ಸಾಗುವುದು ಇನ್ನಷ್ಟು ಕೆಲೊರಿ ಸುಟ್ಟು ಹಾಕಲು ನೆರವಾಗುತ್ತದೆ.
ಆಕ್ವಾರೋಬಿಕ್ಸ್
ನಿಮ್ಮ ಕೀಲುಗಳಿಗೆ ಹೆಚ್ಚಿನ ಒತ್ತಡ ಬೀಳದಂತೆ ಹೃದಯ ಬಡಿತವನ್ನು ಚೆನ್ನಾಗಿಟ್ಟುಕೊಳ್ಳಲು ನೆರವಾಗುವ ಆಕ್ವಾರೋಬಿಕ್ಸ್‌ಅನ್ನು ನೀವು ಈಜುಕೊಳದಲ್ಲಿ ಆರಾಮವಾಗಿ ಮಾಡಬಹುದು.
ನೃತ್ಯ
ನಿಮ್ಮ ಮೆಚ್ಚಿನ ಟ್ಯೂನ್‌ಗಳಿಗೆ ಮನೆಯಲ್ಲೇ ಇದ್ದುಕೊಂಡು ಡ್ಯಾನ್ಸ್ ಮಾಡುವುದು ನಿಮ್ಮ ಮೂಡ್ ಲಿಫ್ಟ್ ಮಾಡುವುದು ಮಾತ್ರವಲ್ಲದೇ, ಗೊತ್ತೇ ಆಗದಂತೆ ಒಂದಷ್ಟು ಕೆಲೊರಿ ಸುಟ್ಟುಹಾಕುತ್ತದೆ.
ತೀವ್ರತರನಾದ ದೈಹಿಕ ತರಬೇತಿ
ವ್ಯಾಯಾಮ ಮಾಡಲು ಸೂಕ್ತ ಸಮಯದ ಹೊಂದಿಸಿಕೊಳ್ಳುವುದು ಕಷ್ಟವಾದಲ್ಲಿ, ಹೈ-ಇಂಟೆನ್ಸಿಟಿ ಟ್ರೇನಿಂಗ್ ಒಂದು ಉತ್ತಮವಾದ ಆಯ್ಕೆ. 30 ಸೆಕೆಂಡ್‌ಗಳ ಕಾಲ ಸ್ಕಿಪ್ಪಿಂಗ್‌ನಿಂದ ಆರಂಭಗೊಂಡು, ಓಟ, ಬೈಕಿಂಗ್ ಅಥವಾ ಜಂಪಿಂಗ್‌ವರೆಗೂ ಕೆಲವೇ ನಿಮಿಷಗಳ ಒಳಗೆ ಒಂದರ ಹಿಂದೊಂದರಂತೆ ಮಾಡಿ ಮುಗಿಸಬಹುದಾದ ತರಬೇತಿ ಇದಾಗಿದೆ.
ಮೆಟ್ಟಿಲುಗಳು
ಇಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲೆಲ್ಲಾ ಎಸ್ಕಲೇಟರ್, ಎಲಿವೇಟರ್‌ಗಳು ಇದ್ದರೂ ಸಹ ಫಿಟ್ನೆಸ್ ಕಾಳಜಿ ಇರುವ ಮಂದಿ ಮೆಟ್ಟಿಲುಗಳನ್ನೇ ಬಳಸಲು ಇಚ್ಛಿಸುತ್ತಾರೆ.
ಸ್ಕಿಪ್ಪಿಂಗ್
ಸ್ಕಿಪ್ಪಿಂಗ್ ಒಂದು ಬಹಳ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ವ್ಯಾಯಾಮವಾಗಿದೆ. ಹೀಗೆ ಮಾಡುವುದರಿಂದ ನೀವು ಗಂಟೆಯೊಂದರಲ್ಲಿ 861ರಿಂದ 1,074 ಕೆಲೊರಿಗಳನ್ನು ಸುಟ್ಟುಹಾಕಬಹುದು.