ಅಮೆರಿಕದಲ್ಲಿ ಕಾರು ಎಂಜಿನ್ ಒಳಗೆ ಸಿಲುಕಿದ ನಾಯಿ ಮರಿಯೊಂದನ್ನು ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬದುಕಿಸಲಾಗಿದೆ.
ಕನ್ಸಾಸ್‌ನ ಜಾನ್ಸನ್ ಕೌಂಟಿಯಲ್ಲಿ ನಿಲುಗಡೆ ಮಾಡಲಾದ ಕಾರಿನ ಎಂಜಿನ್ ಬಳಿ ಹೋಗಿದ್ದ ನಾಯಿ ತಿಳಿಯದೆ ಎಂಜಿನ್ ಒಳಗೆ ಸಿಲುಕಿತ್ತು.
ಇದರ ಚಾಲಕಿಯಾದ ರಾಯಲ್ಸ್ ಡಿಜಿಟಲ್ ವರದಿಗಾರ ಮತ್ತು ನಿರೂಪಕ ಕ್ಯಾರಿ ಗಿಲ್ಲಾಸ್ಪಿ ಇದರ ಬಗ್ಗೆ ಅರಿಯದೇ ಕಾರನ್ನು ಓಡಿಸಿದ್ದಾರೆ. ನಂತರ ನಾಯಿ ಬೊಗಳಲು ಶುರು ಮಾಡಿದಾಗ ಅದರಲ್ಲಿ ನಾಯಿ ಕುಳಿತಿರುವುದು ತಿಳಿದಿದೆ. ಅದೃಷ್ಟವಶಾತ್, ಸಹ ಕಾರ್ಮಿಕರ ಸಹಾಯದಿಂದ, 1.5 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅವರು ನಾಯಿಯನ್ನು ರಕ್ಷಿಸಲು ಸಾಧ್ಯವಾಯಿತು.
ಗಿಲ್ಲಾಸ್ಪಿ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಪಾರ್ಕಿಂಗ್ ಸ್ಥಳದಲ್ಲಿ ನಡೆಯುವಾಗ ಶಬ್ದ ಕೇಳಿದ್ದರಿಂದ ನಾಯಿ ಬದುಕುಳಿದಿದೆ ಎಂದಿದ್ದಾರೆ.