ಮಂಗಳೂರು: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ನಾಯಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ.
ಪತಿಯೊಂದಿಗೆ ಜಗಳವಾಡಿದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು ಕಿ.ಮೀ. ದೂರದ ಉಪ್ಪಿನಂಗಡಿಗೆ ರಾತ್ರಿ ವೇಳೆ ನಡೆದುಕೊಂಡು ಬಂದಿದ್ದಾರೆ. ಅವರನ್ನು ಸಾಕು ನಾಯಿ ಹಿಂಬಾಲಿಸಿಕೊಂಡು ಬಂದಿದ್ದು, ನದಿಗೆ ಹಾರಲು ಸೇತುವೆ ಬಳಿ ಹೋಗುವಾಗ ಚೂಡಿದಾರ ಹಿಡಿದಿಳೆದು ನಿರಂತರವಾಗಿ ಬೊಗಳಿದೆ. ನಾಯಿ ನಿರಂತರವಾಗಿ ಬೊಗಳುಗುವುದನ್ನು ಗಮನಿಸಿದ ಬೈಕ್ ಸವಾರ ಹಾಗೂ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ.
16 ವರ್ಷದ ಹಿಂದೆ ದಂಪತಿ ಪ್ರೀತಿಸಿ ಮದುವೆಯಾಗಿದ್ದು, ಕೆಲವು ವರ್ಷಗಳಿಂದ ವಿರಸವಾಗಿತ್ತು. ಗುರುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಬೇಸರಗೊಂಡ ಪತ್ನಿ ನೇತ್ರಾವತಿ ನದಿ ಸೇತುವೆಯಿಂದ ನದಿಗೆ ಹಾರಲು ಬಂದಿದ್ದಾರೆ. ಆಕೆಯನ್ನು ಹಿಂಬಾಲಿಸಿ ಬಂದ ನಾಯಿ ಚೂಡಿದಾರ ಹಿಡಿದೆಳೆದು ನಿರಂತರವಾಗಿ ಬೊಗಳಿದೆ. ಇದನ್ನು ಗಮನಿಸಿದ ಬೈಕ್ ಸವಾರರೊಬ್ಬರು ಸ್ಥಳೀಯರಾದ ಯು.ಟಿ. ಫಯಾಜ್ ಅವರಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಅವರು ಮಹಿಳೆಯನ್ನು ರಕ್ಷಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.