ನೋಯ್ಡಾ : ನೋಯ್ಡಾದ ಸೊಸೈಟಿಯೊಂದರಲ್ಲಿ ಗುರುವಾರ ರಾತ್ರಿ ಕಾಂಪೌಂಡ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ದಂಪತಿಗೆ ಇಬ್ಬರು ಮಹಿಳೆಯರು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಯುವತಿಯರು ನಾಯಿಯನ್ನು ವಾಕಿಂಗ್ ಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ನಾಯಿ ವೃದ್ದ ದಂಪತಿಯನ್ನು ನೋಡಿ ಬೊಗಳಿದೆ. ನಾಯಿಗೆ ಚೈನ್ ಕಟ್ಟದೇ ಯಾಕೆ ಹೊರಗೆ ಕರೆದುಕೊಂಡು ಬಂದಿದ್ದೀರಾ ಎಂದು ವೃದ್ದ ದಂಪತಿಗಳು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಜಗಳ ತೆಗೆದ ಯುವತಿಯರು ವೃದ್ದ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ .
ಸೆಕ್ಟರ್ ೭೮ ರ ಹೈಡ್ ಪಾರ್ಕ್ ಸೊಸೈಟಿಯಲ್ಲಿ ನಡೆದ ಈ ಘಟನೆಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೃದ್ಧನ ದೂರಿನ ನಂತರ, ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.