ಬೆಂಗಳೂರು: ರಾಜ್ಯದಲ್ಲಿ ನಾಯಿ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಬೀದಿನಾಯಿಗಳ ದಾಳಿಗೆ ಜನರು ಜೀವ ಭಯದಲ್ಲಿ ಕಾಲ ಕಳೆಯುವ ಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಈ ವರ್ಷ ನಾಯಿ ದಾಳಿಯಿಂದಾಗಿ ರೇಬಿಸ್ ರೋಗಕ್ಕೆ 12 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ ರೇಬಿಸ್ ಗೆ 25ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೇಬಿಸ್ ರೋಗ ಪ್ರಕರಣ ಹೆಚ್ಚಳವಾಗಿದ್ದು, ರೇಬಿಸ್ ಇಂಜಕ್ಷನ್ ಗಳಿಗೂ ಬೇಡಿಕೆ ಹೆಚ್ಚಾಗಿದೆ.
ರೇಬಿಸ್ ರೋಗ ನಾಯಿ, ಬೆಕ್ಕು, ಮಂಗ, ಬಾವಲಿ, ದನ, ಮೇಕೆ ಕಡಿತದಿಂದ ಹರಡಬಹುದಾಗಿದೆ. ಸಾಕು ನಾಯಿಯಾಗಿರಲಿ ಅಥವಾ ಬೀದಿ ನಾಯಿಗಳೇ ಆಗಿರಲಿ ಪ್ರಾಣಿಗಳು ಕಚ್ಚಿದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ಚಿಕಿತ್ಸೆ ಪಡೆಯಬೇಕು. ಎಲ್ಲಾ ನಾಯಿಗಳ ಕಡಿತದಿಂದ ರೇಬಿಸ್ ಬರುವುದಿಲ್ಲ, ರೇಬಿಸ್ ಸೋಂಕಿತ ನಾಯಿಗಳು ಅಥವಾ ಹುಚ್ಚು ನಾಯಿಗಳ ಕಡಿತದಿಂದ ಈ ರೋಗ ಬರುತ್ತದೆ. ಈ ಸೋಂಕು ಇರುವ ಬೆಕ್ಕು, ಮಂಗ, ಯಾವುದೇ ಪ್ರಾಣಿಗಳ ಕಡಿತದಿಂದಲೂ ರೇಬಿಸ್ ಬರುತ್ತದೆ. ಇದು ಪ್ರಾಣಹಾನಿಗೂ ಕಾರಣವಾಗುತ್ತದೆ. ಹಾಗಾಗಿ ಪ್ರಾಣಿ ಕಡಿದಾಗ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯುವುದು ಸೂಕ್ತ ಎಂಬುದು ವೈದ್ಯರ ಸಲಹೆ.