ಬಾಯಿಯಿಂದ ದುರ್ವಾಸನೆ ಬೀರುವುದು ಹಲವು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹಲವು ಮನೆಮದ್ದುಗಳನ್ನು ಮಾಡಬಹುದು.
ಬಿಸಿನೀರಿಗೆ ತೆಂಗಿನೆಣ್ಣೆ ಹಾಗೂ ನಿಂಬೆರಸ ಹಾಕಿ ಗಾರ್ಗಲ್ ಮಾಡುವುದು ಅಥವಾ ಬಾಯಿ ಮುಕ್ಕಳಿಸುವುದು ಅತ್ಯುತ್ತಮ ವಿಧಾನ. ಇದರಿಂದ ನಿಮ್ಮ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗಿ ಸ್ವಚ್ಛ ಬಾಯಿ ನಿಮ್ಮದಾಗುತ್ತದೆ.
ಓಂಕಾಳನ್ನು ಬೆಳಿಗ್ಗೆ ಎದ್ದಾಕ್ಷಣ ಬಾಯಿಗೆ ಹಾಕಿಕೊಂಡು ಜಗಿಯುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಪೇರಳೆ ಮರದ ತುದಿಯ ಕಷಾಯ ತಯಾರಿಸಿ ಕುಡಿಯುವುದರಿಂದಲೂ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಬೆಳಿಗ್ಗೆ ಮತ್ತು ರಾತ್ರಿ ಊಟವಾದ ತಕ್ಷಣ ಬಾಯಿಯಲ್ಲಿ ಒಂದೆರಡು ಕಾಳು ಏಲಕ್ಕಿ ಹಾಕಿ ಜಗಿದರೂ ಸಾಕು, ನಿಮ್ಮ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಕಾಫಿ ಟೀ ಕುಡಿಯುವ ಬದಲು ಗ್ರೀನ್ ಟೀ ಕುಡಿದು ನೋಡಿ, ಊಟವಾದ ಬಳಿಕ ಮೊಸರು ಸೇವಿಸಿ ಇದರಿಂದಲೂ ನಿಮ್ಮ ಬಾಯಿಯ ದುರ್ವಾಸನೆ ಓಡಿ ಹೋಗುತ್ತದೆ.