ಸ್ಟೈಲ್ ಲುಕ್‌ಗಾಗಿ ಹೇರ್ ಕಲರ್ ಮಾಡಿಸುತ್ತೇವೆ. ಆದರೆ ಈ ಹೇರ್ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ.
ಹೇರ್ ಕಲರ್ ಮಾಡಿ ನಿಮ್ಮ ಕೂದಲು ಡ್ಯಾಮೇಜ್ ಆಗಿದ್ದರೆ ಕೆಲ ಟಿಪ್ಸ್ ಗಳನ್ನು ಪಾಲಿಸಿ ಕೂದಲಿನ ಆರೋಗ್ಯ ಮತ್ತು ಸೌಂದರ್ಯ ಮರಳಿ ಪಡೆಯಬಹುದು.
ಹೇರ್ ಕಲರ್ ಮಾಡಿ ಕೂದಲು ರಫ್ ಆಗಿದೆಯೇ?
ಕೂದಲಿಗೆ ಬೆಣ್ಣೆ ಹಾಕಿ ಮಸಾಜ್ ಮಾಡಿ. ಇಲ್ಲದಿದ್ದರೆ ಪ್ರತಿದಿನ ಆಲೀವ್ ಎಣ್ಣೆಯಿಂದ ಮಸಾಜ್ ಮಾಡಿ.
ವಾರಕ್ಕೊಮ್ಮೆ ಒಂದು ಬೌಲ್‌ನಲ್ಲಿ ಮೊಟ್ಟೆಯ ಬಿಳಿ ಭಾಗ, ಜೇನು ಹಾಗೂ ತೆಂಗಿನೆಣ್ಣೆ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ.
ಈ ರೀತಿ ಮಾಡುತ್ತಾ ಬಂದರೆ ಕೂದಲಿನ ಸೌಂದರ್ಯ ಮರಳಿ ಪಡೆಯಬಹುದು.
ಕೂದಲು ಕವಲೊಡೆದಿದ್ದರೆ
ಹೇರ್ ಕಲರ್‌ನಲ್ಲಿರುವ ಕೆಮಿಕಲ್‌ನಿಂದಾಗಿ ಕೂದಲು ಕವಲೊಡೆಯುವುದು ಸಹಜ. ಇದಕ್ಕೆ ಸೂಕ್ತ ಪರಿಹಾರವೆಂದರೆ ಒಳ್ಳೆಯ ಶ್ಯಾಂಪೂ ಬಳಸಬೇಕು. ಡೀಪ್ ಮಾಯಿಶ್ಚರೈಸರ್ ಕಂಡೀಷನರ್ ಹಾಕಿ ಕೂದಲಿನ ಆರೈಕೆ ಮಾಡಿ.
ಕೂದಲಿನ ಬುಡದ ಆರೈಕೆಗಾಗಿ
ಮೊಟ್ಟೆ, ಸೂರ್ಯಕಾಂತಿ ಬೀಜ, ಸಿಹಿಗೆಣಸು, ಪ್ರೊಟೀನ್, ವಿಟಮಿನ್ ಸಿ, ಒಮೆಗಾ 3 ಇರುವ ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ.