alex Certify ಗರ್ಭಾವಸ್ಥೆಯಲ್ಲಿ ತುಪ್ಪ ತಿನ್ನುವುದರಿಂದ ಸಾಮಾನ್ಯ ಹೆರಿಗೆಯಾಗುತ್ತದೆಯೇ…..? ಇಲ್ಲಿದೆ ವೈದ್ಯರು ಬಿಚ್ಚಿಟ್ಟ ಸತ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ತುಪ್ಪ ತಿನ್ನುವುದರಿಂದ ಸಾಮಾನ್ಯ ಹೆರಿಗೆಯಾಗುತ್ತದೆಯೇ…..? ಇಲ್ಲಿದೆ ವೈದ್ಯರು ಬಿಚ್ಚಿಟ್ಟ ಸತ್ಯ…!

ಹೆಣ್ಣಿಗೆ ತಾಯ್ತನ ಅನ್ನೋದು ಬಹಳ ಸಂತೋಷದ ಸಮಯ. ಆದರೆ ಇದೊಂದು ಸುದೀರ್ಘ ಪ್ರಯಾಣ, ಇದರಲ್ಲಿ ಏರಿಳಿತಗಳು ಸಹಜ. ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ರೀತಿಯ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಅಷ್ಟೇ ಅಲ್ಲ ವೈದ್ಯರು ಮತ್ತು ಅನುಭವಿಗಳು, ಹಿರಿಯರ ಸಲಹೆಯಂತೆ ಗರ್ಭಿಣಿಯರು ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳುತ್ತಾರೆ.

ಗರ್ಭಾವಸ್ಥೆಗೆ ಸಂಬಂಧಿಸಿದ ಅನೇಕ ಭ್ರಮೆಗಳು ಕೂಡ ವಾಡಿಕೆಯಲ್ಲಿವೆ. ಇದನ್ನು ನಿಜವೆಂದು ನಂಬಿ ಪಾಲಿಸುವವರು ಸಹ ಹೆಚ್ಚಾಗಿದ್ದಾರೆ. ಗರ್ಭಾವಸ್ಥೆಯಲ್ಲಿ ಕೇಸರಿ ಹಾಲನ್ನು ಕುಡಿಯುವುದರಿಂದ ಮಗುವಿನ ಮೈಬಣ್ಣವು ಸುಂದರವಾಗಿರುತ್ತದೆ ಎಂದು ಹೇಳಲಾಗುತ್ತದೆ.  ಪಪ್ಪಾಯ ಹಣ್ಣು ತಿಂದರೆ ಗರ್ಭಪಾತವಾಗುತ್ತದೆ ಎಂಬ ನಂಬಿಕೆಯೂ ಇದೆ. ಅಷ್ಟೇ ಅಲ್ಲ ಗರ್ಭಾವಸ್ಥೆಯಲ್ಲಿ ನೆಲದ ಮೇಲೆ ಕುಳಿತುಕೊಳ್ಳುವುದು ಮತ್ತು ಬಗ್ಗಿ ನೆಲ ಒರೆಸುವುದರಿಂದ ಸಾಮಾನ್ಯ ಹೆರಿಗೆಯಾಗುತ್ತದೆ ಎಂಬ ಭ್ರಮೆ ಕೂಡ ಇದೆ.

ಗರ್ಭಾವಸ್ಥೆಯಲ್ಲಿ ಸಾಕಷ್ಟು ತುಪ್ಪವನ್ನು ತಿನ್ನಬೇಕು, ಇದರಿಂದ ಸಾಮಾನ್ಯ ಹೆರಿಗೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ವೈದ್ಯರು, ಸಂಶೋಧನೆ ಮತ್ತು ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ವೈದ್ಯರ ಪ್ರಕಾರ ತುಪ್ಪವು ಹೆರಿಗೆಯನ್ನು ಸುಲಭಗೊಳಿಸುವುದಿಲ್ಲ ಅಥವಾ ಗರ್ಭಾಶಯವನ್ನು ಗುಣಪಡಿಸುವುದಿಲ್ಲ. ತುಪ್ಪವು ಕೊಬ್ಬನ್ನು ಹೊಂದಿರುತ್ತದೆ, ಅದನ್ನು ಹೆಚ್ಚು ಸೇವಿಸಿದರೆ ಬಹಳ ಬೇಗ ತೂಕ ಹೆಚ್ಚಾಗಬಹುದು. ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ತುಪ್ಪವನ್ನು ತಿನ್ನುವುದು ಸಾಮಾನ್ಯ ಹೆರಿಗೆಗೆ ಕಾರಣವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಾಗೆಯೇ ತುಪ್ಪ ತಿನ್ನುವುದರಿಂದ ಮಗು ಬೆಳ್ಳಗಾಗುತ್ತದೆ ಎಂಬುದು ಕೂಡ ಕೇವಲ ಭ್ರಮೆ.

ಗರ್ಭಾವಸ್ಥೆಯಲ್ಲಿ ತುಪ್ಪವನ್ನು ತಿನ್ನುವುದರಿಂದ ತೂಕ ತ್ವರಿತವಾಗಿ ಹೆಚ್ಚಾಗುತ್ತದೆ. ಇದರಿಂದ ಹೆರಿಗೆ ತುಂಬಾ ಕಷ್ಟವಾಗುತ್ತದೆ. ಭಾರತೀಯ ಆಹಾರದಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ತುಪ್ಪವೂ ಒಂದು. ಮಹಿಳೆ ಗರ್ಭಿಣಿಯಾಗಿದ್ದಾಗ ತುಪ್ಪ ತಿನ್ನಲು ಕುಟುಂಬದ ಹಿರಿಯರು ಸೂಚಿಸುತ್ತಾರೆ. ಗರ್ಭಾವಸ್ಥೆಯಲ್ಲಿ ತುಪ್ಪವನ್ನು ತಿನ್ನುವುದು ಮಹಿಳೆಯ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮಗು ಮತ್ತು ತಾಯಿ ಇಬ್ಬರನ್ನೂ ಪೋಷಿಸುತ್ತದೆ. ತುಪ್ಪ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ತುಪ್ಪವನ್ನು ತಿನ್ನುವ ವಿಧಾನ.

ಗರ್ಭಾವಸ್ಥೆಯಲ್ಲಿ ದಿನಕ್ಕೆ ಒಂದು ಚಮಚ ತುಪ್ಪವನ್ನು ತಿನ್ನಬಹುದು. ಏಕೆಂದರೆ ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆಯಂತಹ ಅಗತ್ಯ ಜೀವಸತ್ವಗಳು ಸಮೃದ್ಧವಾಗಿವೆ. ತುಪ್ಪ ಆರೋಗ್ಯಕರ ಕೊಬ್ಬು ಮತ್ತು ಕೊಬ್ಬಿನಾಮ್ಲಗಳನ್ನು (MCFA) ಹೊಂದಿರುತ್ತದೆ. ಇದು ಮಗುವಿನ ಮೆದುಳಿಗೆ ತುಂಬಾ ಒಳ್ಳೆಯದು. ತುಪ್ಪವು ಮಗುವಿನ ದೈಹಿಕ ಬೆಳವಣಿಗೆಗೂ ಅಗತ್ಯ. ಆದರೆ ಗರ್ಭಿಣಿ ಅದನ್ನು ಸರಿಯಾದ ರೀತಿಯಲ್ಲಿ, ಮಿತವಾಗಿ ತಿನ್ನುವುದು ಬಹಳ ಮುಖ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...