ಕೊರೋನಾ ವೈರಸ್‌ನ ಡೆಲ್ಟಾ ಪ್ಲಸ್ ಎಂಬ ಹೊಸ ಅವತರಣಿಕೆಯು ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿರುವುದಾಗಿ ವರದಿಯಾಗಿದ್ದು, ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ.
ಆದರೆ ಈ ಬಗ್ಗೆ ಯಾವುದೇ ವೈಜ್ಞಾನಿಕ ಮಾಹಿತಿ ಇಲ್ಲದೇ ಇರುವ ಕಾರಣ, ಈ ಹೊಸ ವೈರಸ್‌ಗಳು ಕೋವಿಡ್ ಲಸಿಕೆಯ ಪ್ರಭಾವ ತಗ್ಗಿಸಬಲ್ಲವೇ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಕೋವಿಡ್ ಟಾಸ್ಕ್ ಪಡೆಯ ಮುಖ್ಯಸ್ಥ ವಿಕೆ ಪೌಲ್ ತಿಳಿಸಿದ್ದಾರೆ.
ನಿಮ್ಮ ಮನವನ್ನು ಮುದಗೊಳಿಸುತ್ತೆ ಶ್ವಾನದ ಸುಂದರ ವಿಡಿಯೋ
“ಡೆಲ್ಟಾ ಪ್ಲಸ್ ಅವತರಣಿಕೆ ಎಂದು ಕರೆಯಲಾದ ಈ ವೈರಾಣುವಿನಲ್ಲಿ ಹೆಚ್ಚುವರಿ ಮ್ಯುಟೇಷನ್ ಇದ್ದು, ಇದೊಂದು ಹೊಸ ಅವತರಣಿಕೆಯಾದ ಕಾರಣ, ಈ ಕುರಿತ ವೈಜ್ಞಾನಿಕ ಮಾಹಿತಿ ಇನ್ನೂ ಆರಂಭಿಕ ಹಂತದಲ್ಲಿದೆ” ಎಂದು ಪೌಲ್ ತಿಳಿಸಿದ್ದಾರೆ.
ಈ ‘ಬ್ಯುಸಿನೆಸ್’ ಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಿ
ಸದ್ಯದ ಮಟ್ಟಿಗೆ ದೇಶದಲ್ಲಿ ಅಗಾಧವಾಗಿರುವ ಡೆಲ್ಟಾ ಅವತರಣಿಕೆಯ ಕೋವಿಡ್ ವೈರಸ್ ವಿರುದ್ಧ ಸೀರಂ ಸಂಸ್ಥೆಯ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ಗಳೆರಡೂ ಪ್ರಭಾವಶಾಲಿಯಾಗಿವೆ ಎಂದು ಪೌಲ್ ತಿಳಿಸಿದ್ದಾರೆ.