ಕಲಬುರಗಿ: ಕುವೈತ್ ದೇಶದಲ್ಲಿ ವೈದ್ಯರ ಭಾರಿ ಬೇಡಿಕೆ ಇರುವ ಪ್ರಯುಕ್ತ ಅಂತರರಾಷ್ಟ್ರೀಯ ವಲಸೆ ಕೇಂದ್ರದಿಂದ 468 ಜನ ವೈದ್ಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜನವರಿ ತಿಂಗಳ ಕೊನೆಯ ವಾರದಲ್ಲಿ ನೇರ ನೇಮಕಾತಿ ಸಂದರ್ಶನ ಏರ್ಪಡಿಸಲಾಗಿದೆ.
ಆರು ವರ್ಷಕ್ಕೂ ಮೇಲ್ಪಟ್ಟು ಅನುಭವ ಹೊಂದಿರುವ ಅರವಳಿಕೆ ತಜ್ಞರು, ಸಾಮಾನ್ಯ ಶಸ್ತ್ರ ಚಿಕಿತ್ಸಕರು, ಅಂತರಿಕ ಔಷಧಿ ತಜ್ಞರು, ಪ್ರಸೂತಿ ಶಾಸ್ತ್ರಜ್ಞರು, ಸ್ತ್ರೀರೋಗ ತಜ್ಞರು, ಹೃದ್ರೋಗ ತಜ್ಞರು, ಮೂಳೆ ಚಿಕಿತ್ಸಕರು, ಮಕ್ಕಳ ತಜ್ಞರು, ತುರ್ತು ವಿಭಾಗ ತಜ್ಞರು, ಕುಟುಂಬ ವೈದ್ಯರು, ತೀವ್ರ ನಿಗಾ ಘಟಕ ತಜ್ಞರು, ವಿಕಿರಣ ಶಾಸ್ತ್ರಜ್ಞರು ಮತ್ತು ಇ.ಎನ್.ಟಿ. (ENT) ತಜ್ಞರ ನೇಮಕಾತಿಗಾಗಿ ನೇರ ನೇಮಕಾತಿ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತರು 2023ರ ಜನವರಿ 15 ರೊಳಗಾಗಿ ಜಿಲ್ಲಾ ಕೌಶಲ್ಯಾಭಿವೃಧ್ಧಿ ಅಧಿಕಾರಿ ಕಛೇರಿ, ‘ಡಿ’ ಬ್ಲಾಕ್, ಮೂರನೇ ಮಹಡಿ, ಐಟಿ ಪಾರ್ಕ್, ಕಿಯೋನಿಕ್ಸ್ ಬಿಲ್ಡಿಂಗ್, ಹೈಕೋರ್ಟ್ ಎದುರುಗಡೆ, ಕೆಎಚ್‍ಬಿ ಕಾಲೋನಿ, ಕಲಬುರಗಿ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಲೋಚಕರಾದ ಕೃಷ್ಣ ಕಟ್ಟಿಮನಿ ಇವರ ಮೊಬೈಲ್ ಸಂಖ್ಯೆ 8197614505 ಹಾಗೂ ಅರುಣಕುಮಾರ ಟಿ ಸಜ್ಜನ್ ಇವರ ಮೊಬೈಲ್ ಸಂಖ್ಯೆ 9632214436 ಹಾಗೂ https://www.kaushalkar.com/doctor-registration-kuwait/ ಗಳಿಗೆ ಸಂಪರ್ಕಿಸಲು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.