alex Certify ರೋಗಿಯ ಉದರದಿಂದ 56 ಬ್ಲೇಡ್‌ ತುಂಡುಗಳನ್ನು ಹೊರತೆಗೆದ ವೈದ್ಯರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿಯ ಉದರದಿಂದ 56 ಬ್ಲೇಡ್‌ ತುಂಡುಗಳನ್ನು ಹೊರತೆಗೆದ ವೈದ್ಯರು….!

ರಾಜಸ್ಥಾನದ ಜಲೋರ್‌ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ 25 ವರ್ಷದ ಯುವಕನ ಹೊಟ್ಟೆಯಿಂದ 56 ರೇಜ಼ರ್‌ ತುಂಡುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

ಜಿಲ್ಲೆಯ ಸಂಓರೆ ಪ್ರದೇಶದಲ್ಲಿ ಅಕೌಂಟೆಂಟ್ ಆಗಿರುವ ಈತ ಮೂರು ಪ್ಯಾಕ್ ಬ್ಲೇಡುಗಳನ್ನು ನುಂಗಿದ್ದ ಎಂದು ತಿಳಿದು ಬಂದಿದೆ.

ಶಸ್ತ್ರಚಿಕಿತ್ಸೆ ನಡೆಸಿದ ತಂಡ ವೈದ್ಯರನ್ನು ಮುನ್ನಡೆಸಿದ ಡಾ ನರ್ಸಿ ರಾಮ್ ದೇವಸಿ, “ಮೂರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ 56 ತುಂಡು ರೇಜ಼ರ್‌ ಬ್ಲೇಡ್‌ಗಳನ್ನು ರೋಗಿಯ ದೇಹದಿಂದ ಹೊರತೆಗೆಯಲಾಗಿದೆ. ಮೂರು ಪ್ಯಾಕ್‌ನಲ್ಲಿದ್ದ ಬ್ಲೇಡ್‌ಗಳನ್ನು ತುಂಡು ತುಂಡಾಗಿಸಿ ನುಂಗಿದ್ದರಿಂದ ಆಂತರಿಕ ರಕ್ತಸ್ರಾವ ಹಾಗೂ ಗಾಯಗಳು ಆಗಿದ್ದವು” ಎಂದು ತಿಳಿಸಿದ್ದಾರೆ.

ರೋಗಿಯ ಸ್ಥಿತಿಯು ಸ್ಥಿರವಾಗಿದ್ದು, ಆತ ಬ್ಲೇಡ್‌ಗಳನ್ನು ನುಂಗುವಂಥದ್ದೇನಾಗಿತ್ತು ಎಂದು ಇದುವರೆಗೂ ಯಾರಿಗೂ ತಿಳಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...