ವೈದ್ಯರು ಸಿಸೇರಿಯನ್ ವೇಳೆ ‘ಸರ್ಜಿಕಲ್ ಬಟ್ಟೆ’ ಒಳಗೆ ಬಿಟ್ಟು ಹೊಲಿಗೆ ಹಾಕಿದ ಘಟನೆ ದಕ್ಷಿಣ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಸಿಟಿ ಆಸ್ಪತ್ರೆಯ ಡಾ. ಅನಿಲ್ ವಿರುದ್ಧ ಈ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಪುತ್ತೂರು ತಾಲೂಕಿನ ಆರ್ಯಾಪು ಮಹಿಳೆ ಶರಣ್ಯ ಲಕ್ಷ್ಮೀ (33) ಎಂಬ ಮಹಿಳೆ ನ 27 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಮೂಲಕ ಹೆರಿಗೆ ಆದ ಬಳಿಕ ಅವರು ಡಿ.2 ರಂದು ಡಿಸ್ಚಾರ್ಜ್ ಆಗಿದ್ದರು. ನಂತರ ಕೆಲವು ದಿನಗಳ ನಂತರ ಮಹಿಳೆಗೆ ವಿಪರೀತ ಜ್ವರ ಬಂದಿದೆ. ನಂತರ ವೈದ್ಯರನ್ನು ಸಂಪರ್ಕಿಸಿದಾಗ ಜ್ವರದ ಔಷಧ ನೀಡಲು ಸೂಚನೆ ನೀಡಿದ್ದಾರೆ. ನಂತರ ಕೂಡ ಜ್ವರ ಕಡಿಮೆ ಆಗಲಿಲ್ಲ, ಆಗ ವೈದ್ಯರು ಬೇರೆ ಚೌಷಧಿ ನೀಡಿದ್ದಾರೆ. ಬಳಿಕ ಜ್ವರ ಕಡಿಮೆ ಆಗಿದೆ, ಆದರೆ ತೀವ್ರ ಸಂಧಿನೋವು ಕಾಣಿಸಿಕೊಂಡಿದೆ. ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸಿದಾಗ ನಿಜ ವಿಚಾರ ಗೊತ್ತಾಗಿದೆ. ಮಹಿಳೆಯ ದೇಹದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಆಪರೇಷನ್ ಮಾಡಿದ ಬಟ್ಟೆ, ಇದ್ದು, ಶಸ್ತ್ರ ಚಿಕಿತ್ಸೆ ಮೂಲಕ ಹೊರಕ್ಕೆ ತೆಗೆಯಲಾಗಿದೆ.
ಫೆ.23ರಂದು ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯ ಡಾ. ಅನಿಲ್ ಎಸ್. ಅವರ ಮೇಲೆ ಪುತ್ತೂರು ಪೊಲೀಸ್ ನಿರೀಕ್ಷರಿಗೆ ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲೂ ದೂರು ದಾಖಲಿಸಲಾಗಿದೆ.