ನವದೆಹಲಿ: ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿಸಲು ಏಮ್ಸ್ ಸ್ಥಾನಿಕ ವೈದ್ಯರು ತೀರ್ಮಾನಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಅವರು ನೀಡಿದ ಭರವಸೆಗೆ ವೈದ್ಯರು ಒಪ್ಪಿಗೆ ನೀಡಿಲ್ಲ. ಶೀಘ್ರ ನೀಟ್ ಪಿಜಿ ಕೌನ್ಸೆಲಿಂಗ್ ನಡೆಸುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದರೂ ವೈದ್ಯರು ಅದಕ್ಕೆ ಒಪ್ಪಿಲ್ಲ. ಲಿಖಿತ ಭರವಸೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
NEET-PG 2021 ಕೌನ್ಸೆಲಿಂಗ್ ವಿಳಂಬದ ಖಂಡಿಸಿ ದೆಹಲಿಯಲ್ಲಿ ಸ್ಥಾನಿಕ ವೈದ್ಯರ ಪ್ರತಿಭಟನೆ ಕೈಗೊಂಡಿದ್ದು, ವೈದ್ಯರ ವಿರುದ್ಧ ದೆಹಲಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಡಿಸೆಂಬರ್ 29 ರಂದು ಬೆಳಿಗ್ಗೆ 8 ಗಂಟೆಯಿಂದ ದೇಶಾದ್ಯಂತ ಎಲ್ಲಾ ಆರೋಗ್ಯ ಸೇವೆ ಸ್ಥಗಿತಗೊಳಿಸಲು ಕರೆ ನೀಡಲಾಗಿದೆ.