ವಿಯೆಟ್ನಾಂನ ಮಹಿಳೆಯೊಬ್ಬಳ ಮೆದುಳಿನೊಳಗೆ ಮತ್ತು ಚರ್ಮದ ಅಡಿಯಲ್ಲಿ ಪರಾವಲಂಬಿ ಹುಳುಗಳು ಇರುವುದು ಪತ್ತೆಯಾಗಿದೆ. ಹಸಿ ರಕ್ತ ಮತ್ತು ಬೇಯಿಸಿದ ಮಾಂಸವನ್ನು ಒಳಗೊಂಡಿರುವ ಸ್ಥಳೀಯ ತಿನಿಸಾದ ಟೈಟ್ ಕ್ಯಾನ್ ಅನ್ನು ಸೇವಿಸಿದ ಬಳಿಕ 58 ವರ್ಷದ ಮಹಿಳೆ ಅಸ್ವಸ್ಥಗೊಂಡಿದ್ದಾಳೆ.
ಖಾದ್ಯ ಸೇವಿಸಿದ ಬಳಿಕ ಮಹಿಳೆಗೆ ತೀವ್ರ ತಲೆನೋವು ಉಂಟಾಗಿದೆ. ತಲೆಸುತ್ತಿನಿಂದ ಅನೇಕ ಬಾರಿ ಮನೆಯಲ್ಲೇ ಬಿದ್ದಿದ್ದಳಂತೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರಂಭದಲ್ಲಿ, ಮಹಿಳೆ ಪಾರ್ಶ್ವವಾಯುದಿಂದ ಬಳಲುತ್ತಿದ್ದಾರೆ ಎಂದೇ ವೈದ್ಯಕೀಯ ಸಿಬ್ಬಂದಿ ನಂಬಿದ್ದರು. ಆದರೆ, ಸ್ಕ್ಯಾನ್ ಮಾಡಿದ ನಂತರ ಪರಾವಲಂಬಿ ಹುಳುಗಳು ಮುತ್ತಿಕೊಂಡಿರುವುದು ಪತ್ತೆಯಾಗಿದೆ. ಹುಳುಗಳು ಆಕೆಯ ಮಿದುಳಿನಲ್ಲಿ ಗೂಡುಕಟ್ಟಿದ್ದವು. ಅಷ್ಟೇ ಅಲ್ಲದೆ ಆಕೆಯ ತೋಳುಗಳು, ಕಾಲುಗಳ ಚರ್ಮದ ಅಡಿಯಲ್ಲಿರುವುದು ಕಂಡುಬಂದಿವೆ.
ಈ ಸೋಂಕನ್ನು ಗುಣಪಡಿಸಲು ಮಹಿಳೆಗೆ ಚಿಕಿತ್ಸೆ ನೀಡಿಲಾಯಿತು. ಆ ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ತಾನು ತಿಂಗಳಿಗೊಮ್ಮೆ ರಕ್ತದ ಪುಡಿಂಗ್ ತಿನ್ನುವುದಾಗಿ ಆಕೆ ಒಪ್ಪಿಕೊಂಡಳು. ಸ್ವಚ್ಛತೆ, ರೋಗ ರುಜಿನಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿಂದ ಖಾದ್ಯವನ್ನು ತಾನೇ ತಯಾರಿಸಿಕೊಂಡಿದ್ದಳು. ಈ ರೀತಿ ಆಹಾರ ಸೇವಿಸುವುದರಿಂದ ಅನೇಕರಿಗೆ ಈ ರೀತಿಯ ತೀವ್ರ ಅನಾರೋಗ್ಯ ಕಾಡುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.