ಭಾರತದ ವೈದ್ಯಕೀಯ ಲೋಕದಲ್ಲೇ ಮೊದಲನೆಯದ್ದದೊಂದನ್ನು ಸಾಧಿಸಿರುವ ಸಿಕಂದರಾಬಾದ್‌ನ ಆಸ್ಪತ್ರೆಯೊಂದರ ವೈದ್ಯರು, ಮಧ್ಯ ವಯಸ್ಕ ರೋಗಿಯೊಬ್ಬರಿಗೆ ’ಉಸಿರಾಡುವ ಶ್ವಾಸಕೋಶದ’ ಕಸಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ನಗರದ ಕೃಷ್ಣಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಹೀಗೊಂದು ಪ್ರಕ್ರಿಯೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಮಾಡಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ನಿಮ್ಮ ʼಕೂದಲುʼ ಉದುರುತ್ತಿದೆಯಾ…..? ಚಿಂತೆ ಬಿಡಿ ಇದನ್ನು ಓದಿ
ಆಸ್ಪತ್ರೆಯಲ್ಲಿ ಶ್ವಾಸಕೋಶ ಕಸಿ ಕಾರ್ಯಕ್ರಮದ ನಿರ್ದೇಶಕ ಡಾ. ಸಂದೀಪ್ ಅತ್ತಾವರ್ ಮತ್ತವರ ತಂಡ ಈ ಕ್ರಿಯೆಯನ್ನು ಮಾಡಿ ಮುಗಿಸಿದೆ.
ದಾನ ಕೊಟ್ಟ ಶ್ವಾಸಕೋಶವನ್ನು ಸೀಲ್ ಮಾಡಲಾದ ಯಂತ್ರವೊಂದರಲ್ಲಿ ಇಟ್ಟು, ಅದರ ಮೂಲಕ ಶ್ವಾಸಕೋಶಗಳು ಸಹಜವಾಗಿ ಕೆಲಸ ಮಾಡಲು ಬೇಕಾದ ಪೋಷಕಾಂಶಗಳನ್ನು ಪೂರೈಸುತ್ತಾ, ಯಾವುದೇ ಸೋಂಕು ತಗುಲದಂತೆ ಅಗತ್ಯವಿರುವ ಎಲ್ಲಾ ಆಂಟಿಬಯಾಟಿಕ್ಸ್‌ಗಳನ್ನು ಇಟ್ಟಿರಲಾಗುತ್ತದೆ. ಬ್ರಾಂಕೋಸ್ಕೋಪಿ ಬಳಸಿ ವಾಯುನಾಳಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಇದರೊಂದಿಗೆ ಅಂಗವು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಅರಿಯಲು ಇನ್ನಷ್ಟು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಕೊನೆಗೆ ಶ್ವಾಸಕೋಶವನ್ನು ತಣ್ಣಗೆ ಮಾಡಿ, ರೋಗಿಯ ದೇಹದೊಳಗೆ ಕಸಿ ಮಾಡಲಾಗುತ್ತದೆ.
ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಮನೆಯಲ್ಲೇ ಇದೆ ಮದ್ದು
ಈ ಪ್ರಕ್ರಿಯೆಯಿಂದಾಗಿ ಅಂಗಗಳ ಮರುಬಳಕೆಯ ಸಾಧ್ಯತೆಯಲ್ಲಿ 30%ನಷ್ಟು ಹೆಚ್ಚಳ ಮಾಡುತ್ತದೆ ಎಂದು ಡಾ. ಅತ್ತಾವರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅಮೆರಿಕ, ಕೆನಡಾ ಮತ್ತು ಆಸ್ಟ್ರಿಯಾದ ಕೆಲವೇ ಸಂಸ್ಥೆಗಳು ಈ ನಿರ್ದಿಷ್ಟ ಪ್ರಕ್ರಿಯೆ ನಡೆಸುತ್ತವೆ.