ಒಮಿಕ್ರಾನ್ ಅನ್ನು ಮೊದಲ ಬಾರಿಗೆ ಪತ್ತೆ ಮಾಡಿದ ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘಟನೆಯ ಮುಖ್ಯಸ್ಥೆ ಡಾ. ಆಂಗೆಲಿಕ್ ಕೋಟ್ಜೀ, ಈ ಸೋಂಕು ತೀವ್ರವಾಗಿ ಹರಡಬಲ್ಲದಾಗಿದೆ ಎಂದಿದ್ದಾರೆ.
“ಇದು ಹರಡಬಲ್ಲದಾಗಿದೆ; ನಾನು ಡೆಲ್ಟಾವನ್ನು ನೋಡಿದಾಗ, ಅದು ಸ್ವಲ್ಪ ಕಡಿಮೆ ಮಟ್ಟದಲ್ಲಿ ಹರಡುವ ಸಾಮರ್ಥ್ಯ ಹೊಂದಿತ್ತು. ದಕ್ಷಿಣ ಆಫ್ರಿಕಾದಲ್ಲಿ, ನಾವು ತೀವ್ರ ಪ್ರಕರಣಗಳನ್ನು ಕಂಡಿದ್ದಿಲ್ಲ, ಬಹುತೇಕ ಲಘು ಪ್ರಕರಣಗಳೇ ಆಗಿವೆ,” ಎಂದು ಆಂಗೆಲಿಕ್ ಮಾಧ್ಯಮಗಳೊಂದಿಗೆ ಹೇಳಿದ್ದಾರೆ.
ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ….? ವರದಿಗಾರನಿಗೆ ರಾಹುಲ್ ಗಾಂಧಿ ಪ್ರಶ್ನೆ
ಭಾರತದಲ್ಲಿ ಇನ್ನೂ ಸಹ ಡೆಲ್ಟಾ ರೂಪಾಂತರಿಯೇ ಬಹುದೊಡ್ಡ ಕೋವಿಡ್ ಸೋಂಕಾಗಿದ್ದು, ಒಮಿಕ್ರಾನ್ ಇನ್ನೂ ಅದನ್ನು ಹಿಂದಿಕ್ಕಿಲ್ಲ ಎಂದು ಐಸಿಎಂಆರ್ ತಿಳಿಸಿದ ಬೆನ್ನಲ್ಲೇ ಆಂಗೆಲಿಕ್ ಹೇಳಿಕೆ ಬಂದಿದೆ.
ಒಮಿಕ್ರಾನ್ ರೂಪಾಂತರಿಯು ಮರುಸೋಂಕಿಗೆ ಕಾರಣವಾಗುವ ಸಾಧ್ಯತೆ ಡೆಲ್ಟಾದ ಐದು ಪಟ್ಟಿದೆ ಎಂದು ಅಧ್ಯಯನವೊಂದು ತಿಳಿಸಿದೆ.