alex Certify ರೋಗಿಗಳ ಸಂಬಂಧಿಕರೊಂದಿಗೆ ಅನುಚಿತ ವರ್ತನೆ: ವೈದ್ಯ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿಗಳ ಸಂಬಂಧಿಕರೊಂದಿಗೆ ಅನುಚಿತ ವರ್ತನೆ: ವೈದ್ಯ ಸಸ್ಪೆಂಡ್

ಗದಗ: ರೋಗಿಗಳ ಸಂಬಂಧಿಕರ ಮೇಲೆ ಅತಿರೇಕದಿಂದ ವರ್ತಿಸಿ ಬೆದರಿಕೆ ಹಾಕಿದ್ದ ಗದಗ ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ಗೌತಮ್ ಪಾಟೀಲ್ ಅವರನ್ನು ಅಮಾನತು ಮಾಡಲಾಗಿದೆ.

ತಾಯಿ ಮಗುವಿಗೆ ಸರಿಯಾಗಿ ಚಿಕಿತ್ಸೆ ನೀಡಲು ಒತ್ತಾಯಿಸಿದ ರೋಗಿಗಳ ಸಂಬಂಧಿಕರ ಮೇಲೆ ಗೌತಮ್ ಪಾಟೀಲ್ ಅತಿರೇಕದಿಂದ ವರ್ತಿಸಿ ಬೆದರಿಕೆ ಹಾಕಿದ್ದ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿತ್ತು.

ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಯ ಮುಷ್ತಾಕ್ ತಮ್ಮ ಪತ್ನಿಯನ್ನು ಹೆರಿಗೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆ ಬಳಿಕ ಮಗು ಜಾಂಡಿಸ್ ನಿಂದ ಬಳಲುತ್ತಿದ್ದು, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ದೂರಿದ ಮುಷ್ತಾಕ್ ಸರಿಯಾಗಿ ಆರೈಕೆ ಮಾಡದಿದ್ದರೆ ಆರೋಗ್ಯ ಸಚಿವರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಇದರಿಂದ ಆಕ್ರೋಶಗೊಂಡ ಡಾ. ಗೌತಮ್ ಪಾಟೀಲ್, ಯಾರಿಗೆ ಹೇಳುತ್ತೀಯಾ ಹೇಳು ಎಂದು ನಿಂದಿಸಿ ಮುಷ್ತಾಕ್ ಜೊತೆಗಿದ್ದ ಸಂಬಂಧಿಕರ ವಿರುದ್ಧವು ಹರಿಹಾಯ್ದಿದ್ದಾರೆ. ವಿಡಿಯೋ ಮಾಡಿದರೆ ಹೊಡೆತ ಬೀಳುತ್ತವೆ ಎಂದು ಹೊಡೆಯಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಬೆಳಕಿಗೆ ಬಂದ ನಂತರ ಗೌತಮ್ ಪಾಟೀಲ್ ಅವರನ್ನು ಅಮಾನತು ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...