alex Certify ರೋಗ ಪತ್ತೆ ಹಚ್ಚಲು ಹೆಣಗಾಡಿದ ವೈದ್ಯ; ಕೇವಲ 10 ಸೆಕೆಂಡ್ ನಲ್ಲಿ ಗುರುತಿಸಿದ ಮನೆಗೆಲಸದ ಅಜ್ಜಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ಪತ್ತೆ ಹಚ್ಚಲು ಹೆಣಗಾಡಿದ ವೈದ್ಯ; ಕೇವಲ 10 ಸೆಕೆಂಡ್ ನಲ್ಲಿ ಗುರುತಿಸಿದ ಮನೆಗೆಲಸದ ಅಜ್ಜಿ…!

ಹೊಸ ವೈದ್ಯರಿಗಿಂತ ಹಳೇ ರೋಗಿಯೇ ವಾಸಿ ಎಂಬ ಮಾತಿದೆ. ಈ ಮಾತಿಗೆ ಹೋಲುವಂತೆ ವೈದ್ಯರಿಗೆ ಕಂಡುಹಿಡಿಯಲು ಕಷ್ಟವಾದ ರೋಗ ಅವರ ಮನೆಗೆಲಸದಾಕೆಗೆ ಸುಲಭವಾಗಿದೆ.

ಕೇರಳದ ಹೆಪಟಾಲಜಿಸ್ಟ್ ಒಬ್ಬರು ತಮ್ಮ ಕುಟುಂಬದ ಸದಸ್ಯರಿಗೆ ಇದ್ದ ರೋಗವನ್ನು ಗುರುತಿಸಲು ವಿಫಲವಾದರೆ ತಮ್ಮ ಮನೆಯಲ್ಲಿದ್ದ ಹಿರಿಯ ಮನೆಗೆಲಸದಾಕೆ ಹೇಗೆ ಅದನ್ನು ಪತ್ತೆಹಚ್ಚಲು ಮುಂದಾದರು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದಿ ಲಿವರ್ ಡಾಕ್ ಎಂದೇ ಖ್ಯಾತಿಗಳಿಸಿರುವ ಸಿರಿಯಾಕ್ ಅಬ್ಬಿ ಫಿಲಿಪ್ಸ್ ವೈದ್ಯರು ಎಲ್ಲಾ ಪರೀಕ್ಷೆಗಳು ನಡೆಸಿದ ನಂತರವೂ ತಮ್ಮ ಕುಟುಂಬ ಸದಸ್ಯರಿಗಿದ್ದ ಅನಾರೋಗ್ಯ ಸ್ಥಿತಿಯನ್ನು ಗುರುತಿಸಲು ವಿಫಲನಾಗಿದ್ದೆ ಎಂಬುದನ್ನು ತಿಳಿಸಿದ್ದಾರೆ.

“ನನ್ನ ಕುಟುಂಬದ ವಯಸ್ಕ ಸದಸ್ಯರೊಬ್ಬರಿಗೆ ಶೀತ, ಆಯಾಸ, ಸಂಧಿವಾತ ಮತ್ತು ವಿಲಕ್ಷಣವಾದ ದದ್ದುಗಳೊಂದಿಗೆ ಸ್ವಲ್ಪ ಜ್ವರವಿತ್ತು. ನಾನು ವೈರಲ್ ಹೆಪಟೈಟಿಸ್‌ನಿಂದ ಕೋವಿಡ್ -19, ಇನ್ಫ್ಲುಯೆನ್ ಝ , ಡೆಂಗ್ಯೂ ಮತ್ತು ಎಬ್‌ಸ್ಟೈನ್ ಬಾರ್ ವೈರಸ್‌ವರೆಗೆ ಎಲ್ಲವನ್ನೂ ಪರೀಕ್ಷಿಸಿದೆ. ಆದರೆ ಯಾವುದರಲ್ಲೂ ಪಾಸಿಟಿವ್ ಬಂದಿರಲಿಲ್ಲ” ಎಂದಿದ್ದಾರೆ.

ಬಳಿಕ ಅವರ ಮನೆಯಲ್ಲಿದ್ದ ಹಿರಿಯ ಮನೆಗೆಲಸದಾಕೆ ಒಳಗೆ ಬಂದು ತನ್ನ ಮೊಮ್ಮಕ್ಕಳಲ್ಲೂ ಈ ದದ್ದು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಇದನ್ನು ಸ್ಥಳೀಯ ಭಾಷೆಯಲ್ಲಿ ‘ಅಂಜಂಪಣಿ’ ಎಂದು ಕರೆಯಲಾಗುತ್ತದೆ (5 ನೇ ರೋಗ) ಈ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದರಂತೆ. ಬಳಿಕ ವೈದ್ಯ ಪಾರ್ವೊವೈರಸ್ B19 ತಪಾಸಣೆ ಮಾಡಿದಾಗ ಪಾಸಿಟಿವ್ ಫಲಿತಾಂಶ ಬಂದಿದೆ.

17 ವರ್ಷಗಳ ತನ್ನ ವೈದ್ಯಕೀಯ ವೃತ್ತಿಯಲ್ಲಿ ನಾನು ಕಂಡುಹಿಡಿಯಲಾಗದ ರೋಗವನ್ನು ನನ್ನ ವಯಸ್ಸಾದ ಮನೆಗೆಲಸದಾಕೆ 10 ಸೆಕೆಂಡುಗಳಲ್ಲಿ ಕಂಡುಹಿಡಿದರೆಂದು ಸಿರಿಯಾಕ್ ಅಬ್ಬಿ ಫಿಲಿಪ್ಸ್ ಹೇಳಿದ್ದಾರೆ.

ಐದನೇ ರೋಗವು ಮಾನವ ಪಾರ್ವೊವೈರಸ್ B19 ನಿಂದ ಉಂಟಾಗುತ್ತದೆ. ವಯಸ್ಕರಿಗಿಂತ ಮಕ್ಕಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಮೂಗು ಮತ್ತು ಬಾಯಿಯಲ್ಲಿರುವ ದ್ರವಗಳ ಮೂಲಕ ರೋಗ ಹರಡುತ್ತದೆ. ಇದು ಕೆನ್ನೆಗಳ ಮೇಲೆ ಕೆಂಪು ದದ್ದುಗಳನ್ನು ಉಂಟುಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...