ಕನ್ನಡಕ ಧರಿಸಲು ಇಚ್ಛೆ ಪಡೆದವರು ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಾರೆ. ಆದರೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಬಲು ಎಚ್ಚರಿಕೆಯಿಂದ ಇರಬೇಕು. ಲೆನ್ಸ್ ಹಾಕಿಕೊಳ್ಳುವಾಗ ಹಾಗೂ ತೆಗೆಯುವಾಗ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿರಬೇಕು. ಅಲ್ಲದೆ ಪ್ರತಿನಿತ್ಯ ರಾತ್ರಿ ಮಲಗುವಾಗ ಇದನ್ನು ತೆಗೆದು ಸಲ್ಯೂಷನ್ ನಲ್ಲಿ ಹಾಕಿರಬೇಕಾಗುತ್ತದೆ.
ಆದರೆ ಅಮೇರಿಕಾದ ಕ್ಯಾಲಿಫೋರ್ನಿಯದಲ್ಲಿ ನಡೆದಿರುವ ವಿಲಕ್ಷಣ ಪ್ರಕರಣ ಒಂದರಲ್ಲಿ ವೃದ್ಧ ಮಹಿಳೆಯೊಬ್ಬರು ರಾತ್ರಿ ತಾವು ಕಾಂಟಾಕ್ಟ್ ಲೆನ್ಸ್ ತೆಗೆಯುವುದನ್ನು ಮರೆತಿದ್ದು, ಅದರ ಬದಲಿಗೆ ಪ್ರತಿನಿತ್ಯ ಹೊಸ ಲೆನ್ಸ್ ಹಾಕಿಕೊಂಡಿದ್ದಾರೆ. ಇದರ ಪರಿಣಾಮ ಆಕೆಯ ಕಣ್ಣುಗಳಲ್ಲಿ 23 ಕಾಂಟಾಕ್ಟ್ ಲೆನ್ಸ್ ಗಳು ಶೇಖರಗೊಂಡಿದ್ದು, ಅದನ್ನು ವೈದ್ಯರು ಬಲು ನಾಜೂಕಿನಿಂದ ಹೊರ ತೆಗೆದಿದ್ದಾರೆ.
ಈ ಪ್ರಕ್ರಿಯೆಯನ್ನು ವಿಡಿಯೋ ಮಾಡಿ ಅವರು ಹಾಕಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲೆನ್ಸ್ ಹಾಕಿಯೇ ಮಹಿಳೆ ಮಲಗಿದ್ದ ವೇಳೆ ಅದು ಸರಿದುಕೊಂಡು ಒಂದು ಮೂಲೆಗೆ ಹೋಗಿ ಕೂತಿತ್ತು ಎನ್ನಲಾಗಿದೆ. ಹೀಗಾಗಿ ಆಕೆ ಮಾರನೆ ದಿನ ಹೊಸ ಲೆನ್ಸ್ ಹಾಕಿಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ.