ಗಡ್ಡ ಬಿಡುವುದು ಸದ್ಯ ಅನೇಕರ ಫ್ಯಾಷನ್. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಅನೇಕರು ಉದ್ದದ ಗಡ್ಡವನ್ನು ಇಷ್ಟಪಡ್ತಾರೆ. ಕೆಲ ಹುಡುಗಿಯರು ಕೂಡ ಸುಂದರ ಗಡ್ಡವಿರುವ ಹುಡುಗನಿಗೆ ಆಕರ್ಷಿತರಾಗ್ತಾರೆ. ಗಡ್ಡದ ಬಗ್ಗೆ ಎನ್ ಎಚ್ ಎಸ್ ಶಸ್ತ್ರಚಿಕಿತ್ಸಕ ಡಾ. ಕರಣ್ ರಾಜನ್ ಕೆಲವೊಂದು ವಿಷ್ಯವನ್ನು ಹಂಚಿಕೊಂಡಿದ್ದಾರೆ.
ಗಡ್ಡ ಬಿಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಡಾ ಕರಣ್ ಹೇಳಿದ್ದಾರೆ. ಇದರಿಂದ ತ್ವಚೆಯ ಆರೋಗ್ಯ ಉತ್ತಮವಾಗಿರುತ್ತದೆ. ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಕ್ಲೀನ್ ಶೇವ್ ಮಾಡುವುದಕ್ಕಿಂತ ಉದ್ದ ಗಡ್ಡ ಬಿಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ.
ಆಸ್ಪತ್ರೆಯ ಸಿಬ್ಬಂದಿಯ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, ಕ್ಲೀನ್ ಶೇವ್ ಮಾಡಿದವರಿಗಿಂತ ಗಡ್ಡವಿರುವವರು ಹೆಚ್ಚು ನೈರ್ಮಲ್ಯದಿಂದ ಇರುತ್ತಾರೆ ಎಂದು ಡಾ ಕರಣ್ ಹೇಳಿದ್ದಾರೆ. ಕ್ಲೀನ್ ಶೇವ್ ಮಾಡಿದ ಜನರಿಗೆ ಎಂ ಆರ್ ಎಸ್ ಎ ಎಂಬ ಬ್ಯಾಕ್ಟೀರಿಯಾ ಹರಡುವ ಅಪಾಯವಿದೆ. ಗಡ್ಡವು ಚರ್ಮವನ್ನು ಧೂಳು ಮತ್ತು ಕೊಳೆಯಿಂದ ರಕ್ಷಿಸುತ್ತದೆ. ಇದ್ರಿಂದ ಚರ್ಮ ಮೃದುವಾಗುತ್ತದೆ. ಡಾ.ಕರಣ್ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.