ಮಂಗಳೂರು: ಮಂಗಳೂರಿನ ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿದ ವೈದ್ಯನ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ವೈದ್ಯಗೆ ಸೂಚಿಸಿದ್ದಾರೆ.
ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸದೆ ಸೂಪರ್ ಮಾರ್ಕೆಟ್ ಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಮಾಸ್ಕ್ ಧರಿಸಿಕೊಂಡು ಬನ್ನಿ. ಬೇರೆ ಗ್ರಾಹಕರಿಗೆ ತೊಂದರೆಯಾಗುತ್ತದೆ. ಮಾಸ್ಕ್ ಧರಿಸದಿದ್ದರೆ ಒಳಗೆ ಬರಬೇಡಿ ಎಂದು ಹೇಳಿದ್ದಾರೆ.
ಆದರೆ, ಇದನ್ನು ಒಪ್ಪದ ವೈದ್ಯ ಶ್ರೀನಿವಾಸ್ ಅವರು, ನಾನು ಸರ್ಕಾರದ ದಡ್ಡ ನಿಯಮಗಳನ್ನು ಪಾಲಿಸುವುದಿಲ್ಲ. ವಿಜ್ಞಾನ ಹೇಳಿದಂತೆ ಕೇಳುತ್ತೇನೆ ಎಂದು ವಾದ ಮಾಡಿದ್ದಾರೆ. ಸೂಪರ್ ಮಾರ್ಕೇಟ್ ಮಾಲೀಕರು ನೀಡಿದ ದೂರಿನ ಅನ್ವಯ ವೈದ್ಯ ಶ್ರೀನಿವಾಸ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.