ಸ್ಕಾಟ್‌ಲ್ಯಾಂಡ್‌ನಲ್ಲಿ ಸೇವೆ ಸಲ್ಲಿಸ್ತಾ ಇದ್ದ ಭಾರತೀಯ ಮೂಲದ ವೈದ್ಯರೊಬ್ಬರು 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ.
ಆರೋಪಿ ಡಾ.ಕೃಷ್ಣ ಸಿಂಗ್‌ಗೆ ಈಗ 72 ವರ್ಷ. ಕಳೆದ 35 ವರ್ಷಗಳಿಂದ್ಲೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಬಂದ ಮಹಿಳಾ ರೋಗಿಗಳಿಗೆ ಚುಂಬಿಸುವುದು, ಅಬರನ್ನು ತಬ್ಬಿಕೊಳ್ಳುವುದು, ಅಶ್ಲೀಲ ಕಾಮೆಂಟ್ ಮಾಡುವುದು ಹಾಗೂ ಅನುಚಿತವಾಗಿ ನಡೆದುಕೊಳ್ಳುವುದು ಇವರಿಗೆ ಅಭ್ಯಾಸವಾಗಿ ಹೋಗಿತ್ತು.
ಆದ್ರೆ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಈ ಆರೋಪಗಳನ್ನು ಡಾ.ಕೃಷ್ಣ ನಿರಾಕರಿಸಿದ್ದರು. 1983ರ ಫೆಬ್ರವರಿಯಿಂದ್ಲೇ ಈ ವೈದ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. 2018ರ ಮೇ ವರೆಗೂ ಇಂತಹ ಪ್ರಕರಣಗಳು ದಾಖಲಾಗಿದ್ದವು. ಆಸ್ಪತ್ರೆಯ ಅಪಘಾತ ಮತ್ತು ತುರ್ತು ವಿಭಾಗಗಳಲ್ಲಿ, ಪೊಲೀಸ್ ಠಾಣೆ ಮತ್ತು ರೋಗಿಗಳ ಮನೆಗಳಿಗೆ ಭೇಟಿ ನೀಡಿದಾಗ ಡಾ. ಕೃಷ್ಣ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರಂತೆ.
ಇದನ್ನೇ ಅವರು ಅಭ್ಯಾಸ ಮಾಡಿಕೊಂಡಿದ್ದರು ಅಂತಾ ಕೋರ್ಟ್ ಹೇಳಿದೆ. ಡಾ. ಕೃಷ್ಣ ಸಿಂಗ್ ಅವರಿಗೆ ವೈದ್ಯಕೀಯ ಸೇವೆಗಾಗಿ ʼರಾಯಲ್ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ʼ ಎಂಬ ಪ್ರಶಸ್ತಿ ಕೂಡ ಬಂದಿತ್ತು. ಆದ್ರೆ ಅವರ ವಿರುದ್ಧದ ಈ ಪ್ರಕರಣ ಗೌರವವನ್ನೆಲ್ಲ ಮಣ್ಣುಪಾಲು ಮಾಡಿದೆ.