ಶಿವಮೊಗ್ಗ: ಪತ್ನಿಯ ರಕ್ತ ಪರೀಕ್ಷೆ ವರದಿಯನ್ನು ತೋರಿಸಲು ವೈದ್ಯೆಯ ಬಳಿ ಹೋಗಿದ್ದ ವ್ಯಕ್ತಿಯೊಬ್ಬ ವೈದ್ಯೆ ಏಕಾಂಗಿಯಾರುವುದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ರವಿಗೌಡ ಕೃತ್ಯವೆಸಗಿದ ಆರೋಪಿ. ಡಿಸೆಂಬರ್ 29ರಂದು ಘಟನೆ ನಡೆದಿದೆ. ರವಿಗೌಡ ತನ್ನ ಪತ್ನಿ ರಕ್ತಪರೀಕ್ಷೆ ವರದಿ ತೋರಿಸಲು ವೈದ್ಯೆಯ ಮನೆಗೆ ಹೋಗಿದ್ದು, ಈ ವೇಳೆ ವೈದ್ಯೆ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಕೂಡಲೇ ಆಕ್ಷೇಪಿಸಿ ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ತಕ್ಷಣವೇ ಆರೋಪಿಯ ಪತ್ನಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ ವೈದ್ಯೆ ಡಿಸೆಂಬರ್ 31 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.