ವೈದ್ಯೋ ನಾರಾಯಣ ಹರಿಃ ಅನ್ನುವ ಮಾತೊಂದು ಇದೆ. ಇಲ್ಲಿ ವೈದ್ಯರನ್ನ ದೇವರಿಗೆ ಹೊಲಿಸಲಾಗಿದೆ. ಪ್ರಾಣ ಉಳಿಸುವ ಹಾಗೂ ರೋಗದಿಂದ ಮುಕ್ತ ಮಾಡುವ ಶಕ್ತಿ ವೈದ್ಯರಲ್ಲಿ ಇದೆ ಅನ್ನುವ ಕಾರಣಕ್ಕಾಗಿ. ಆದರೆ, ವೈದ್ಯರ ಸೋಗಿನಲ್ಲಿ ಇರುವ ಕೆಲ ರಾಕ್ಷಸರು, ಅಮಾಯಕರ ಪಾಲಿಗೆ ರಣಹದ್ದುಗಳಾಗಿದ್ದಾರೆ.
ಇತ್ತೀಚೆಗೆ ವೈದ್ಯನೊಬ್ಬ, ಚಿಕಿತ್ಸೆಗೆಂದು ಬಂದ ರೋಗಿಯ ಮಗಳಿಗೆ ಮದುವೆ ಆಗುವುದಾಗಿ ಸುಳ್ಳು ಹೇಳಿದ್ದಾನೆ. ಅಷ್ಟೆ ಅಲ್ಲ ತಾನೇ ಭಾವೀ ಗಂಡ ಎಂದು ಹೇಳಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ವೈದ್ಯ ಮಾಡುತ್ತಿದ್ದ ಕಾಮಕಾಂಡ ಗೊತ್ತಾಗಿದ್ದೇ ತಡ ರೋಗಿ ತನ್ನ ಮಗಳನ್ನ ಕರೆದುಕೊಂಡು ಹೋಗಿ ಸ್ಥಳೀಯ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಈ ಎಫ್ಐಆರ್ ದಾಖಲಿಸಿಕೊಂಡು ಆರೋಪದ ಮೇಲೆ ವೈದ್ಯನನ್ನ ಬಂಧಿಸಲಾಗಿದೆ.
ಪೊಲೀಸರು ಈಗಾಗಲೇ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಪಶ್ಚಿಮ ಬಂಗಾಳದ ಮತ್ತೊರ್ವ ಯುವತಿ ಜೊತೆ ಈತನ ನಿಶ್ಚಿತಾರ್ಥ ಈಗಾಗಲೇ ಆಗಿದ್ದು, ಈ ವಿಷಯ ಈಗ ಬಹಿರಂಗವಾಗಿದೆ. ಆದರೂ ಚಿಕಿತ್ಸೆಗೆಂದು ಬಂದ ರೋಗಿಯ ಮಗಳೊಂದಿಗೆನೇ (26) ದೈಹಿಕ ಸಂಪರ್ಕ ಇಟ್ಟುಕೊಂಡಿದ್ದಾನೆ. ಎರಡು ವರ್ಷದ ಹಿಂದೆ ತಂದೆಯ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ವೈದ್ಯನ ಪರಿಚಯ ಯುವತಿಗಾಗಿದೆ.
ಆರೋಪಿಯು ಭುವನೇಶ್ವರದ ಏಮ್ಸ್ನಲ್ಲಿ ವೈದ್ಯನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದ್ದು, ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.