alex Certify ಚಿಕಿತ್ಸೆಗೆ ಬಂದವರ ಬಳಿ ಲಂಚ ಪಡೆದಿದ್ದ ವೈದ್ಯ ಅಮಾನತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕಿತ್ಸೆಗೆ ಬಂದವರ ಬಳಿ ಲಂಚ ಪಡೆದಿದ್ದ ವೈದ್ಯ ಅಮಾನತು

ಚಿತ್ರದುರ್ಗ: ಶಸ್ತ್ರಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರಿಂದ ಲಂಚ ಸ್ವೀಕರಿಸಿದ್ದ ಜನರಲ್ ಸರ್ಜನ್ ಡಾ. ಸಾಲಿ ಮಂಜಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಸಾಲಿ ಮಂಜಪ್ಪ ಲಂಚ ಸ್ವೀಕರಿಸಿದ ವಿಡಿಯೋ ವೈರಲ್ ಆಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಈ ಬಗ್ಗೆ ಮಾಹಿತಿ ಪಡೆದು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಚಂದ್ರಶೇಖರ ಎಂಬುವರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಯ ಸಲುವಾಗಿ ದಾಖಲಾಗಿದ್ದರು. ಕರ್ತವ್ಯದಲ್ಲಿದ್ದ ವೈದ್ಯ ಡಾ.ಸಾಲಿ ಮಂಜಪ್ಪ ಹೊರ ರೋಗಿಯಾಗಿ ಚಂದ್ರಶೇಖರ್ ಅವರನ್ನು ಪರೀಕ್ಷಿಸಿದ ಬಳಿಕ ಶಸ್ತ್ರಚಿಕಿತ್ಸೆ ಸಲುವಾಗಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದರು. ರೋಗಿಯ ಸಂಬಂಧಿಕರೊಂದಿಗೆ ಮಾತನಾಡಿ ಹಣ ಕೇಳಿ ಪಡೆದಿದ್ದು, ವಿಡಿಯೋ ಚಿತ್ರೀಕರಣವಾಗಿತ್ತು. ಡಾ. ಸಾಲಿ ಮಂಜಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರಿಂದ ವಿವರಣೆ ಪಡೆದು ಅಮಾನತು ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...