ದಿನನಿತ್ಯದ ಬದುಕಿನಲ್ಲಿ ನಾವು ಧರಿಸೋ ಬಟ್ಟೆ, ಶೂಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗಿನ ಡಿಜಿಟಲ್ ದುನಿಯಾದಲ್ಲಂತೂ ಔಟ್ ಫಿಟ್ ಗೆ ಎಲ್ಲಿಲ್ಲದ ಮಹತ್ವ. ಪ್ರತಿದಿನ ನಿಮ್ಮ ಡ್ರೆಸ್, ಸ್ಟೈಲ್ ಸ್ಟೇಟ್ಮೆಂಟನ್ನೆಲ್ಲ ಜಾಲತಾಣಗಳಲ್ಲಿ ಪೋಸ್ಟ್ ಮಾಡೋದು ಕಾಮನ್.
ಇದರ ಜೊತೆಜೊತೆಗೆ ಶುಚಿತ್ವಕ್ಕೂ ಮಹತ್ವ ಕೊಡಲೇಬೇಕು. ನಾವು ತೊಡುವ ಬಟ್ಟೆಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ.
ಪ್ರತಿದಿನ ಟಾಪ್, ಬಾಟಮ್, ಒಳ ಉಡುಪುಗಳನ್ನು ಬದಲಾಯಿಸಿದಂತೆ ಸಾಕ್ಸ್ ಅನ್ನು ಅಹ ಬದಲಾಯಿಸಲೇಬೇಕು. ಸಾಕ್ಸ್ ನಮ್ಮ ಪಾದಗಳ ಬೆವರನ್ನು ಹೀರಿಕೊಳ್ಳುತ್ತದೆ, ಶೂ ಬೈಟ್ ನಿಂದ ರಕ್ಷಿಸುತ್ತದೆ.
ಸಾಕ್ಸ್ ಅನ್ನು ಮೂರ್ನಾಲ್ಕು ದಿನಗಳವರೆಗೆ ತೊಳೆಯದೇ ಧರಿಸಬೇಡಿ. ಕ್ಯಾಲಿಫೋರ್ನಿಯಾ ಪೀಡಿಯಾಟ್ರಿಕ್ ಅಸೋಸಿಯೇಶನ್ ಪ್ರಕಾರ ನಮ್ಮ ಪಾದಗಳಲ್ಲಿ 2.5 ಲಕ್ಷ ಬೆವರು ಗ್ರಂಥಿಗಳಿವೆ.
ಅವು ದಿನಕ್ಕೆ ಅರ್ಧ ಪಿಂಟ್ ನಷ್ಟು ಬೆವರನ್ನು ಹೊರಹಾಕುತ್ತವೆ. ಪಾದಗಳಲ್ಲೇ ಅತಿ ಹೆಚ್ಚು ಡೆಡ್ ಸ್ಕಿನ್ ಸೆಲ್ಸ್ ಕೂಡ ಇದೆ. ಇದರಿಂದ ರೋಗಕಾರಕ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ.
ಹಾಗಾಗಿ ಇಡೀ ದಿನ ನೀವು ಸಾಕ್ಸ್ ಧರಿಸಿಯೇ ಇರುವುದರಿಂದ ಅದು ಬೆವರು ವಾಸನೆ ಬರುವುದು ಸಹಜ. ಮಾರನೇ ದಿನವೂ ತೊಳೆಯದೇ ಅದನ್ನೇ ಧರಿಸಿದರೆ ಎಲ್ಲರೂ ನಿಮ್ಮಿಂದ ದೂರ ಓಡುತ್ತಾರೆ. ಇನ್ಫೆಕ್ಷನ್ ನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪ್ರತಿನಿತ್ಯ ತೊಳೆದು ಶುಚಿಯಾಗಿರುವ ಸಾಕ್ಸನ್ನೇ ಧರಿಸಿ.