ಪ್ರತಿಯೊಬ್ಬ ಮಹಿಳೆ ಬ್ರಾ ಧರಿಸುವುದು ಅಗತ್ಯ. ಆದರೆ 24 ಗಂಟೆ ಬ್ರಾ ಧರಿಸುವ ಅಭ್ಯಾಸದಲ್ಲಿದ್ದರೆ ಅದನ್ನು ಈಗ್ಲೇ ಬದಲಾಯಿಸಿಕೊಳ್ಳುವ ಅಗತ್ಯವಿದೆ. ಇಡೀ ರಾತ್ರಿ ಬ್ರಾ ಧರಿಸುವುದರ ದೊಡ್ಡ ಅನಾನುಕೂಲವೆಂದರೆ ನಿಮ್ಮ ಸ್ತನಗಳ ಸುತ್ತ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಹಾಗಾಗಿ ರಾತ್ರಿ ಮಲಗುವಾಗ ಬ್ರಾ ಕಳಚಿ ಮಲಗುವುದು ಬಹಳ ಒಳ್ಳೆಯದು.
ಇದರೊಂದಿಗೆ 24 ಗಂಟೆಗಳ ಕಾಲ ಸ್ತನ ಬಂಧವನ್ನು ಧರಿಸುವ ಜನರು ಶೀಘ್ರದಲ್ಲೇ ಬೆನ್ನುನೋವಿನ ಸಮಸ್ಯೆಗೆ ಒಳಗಾಗ್ತಾರೆ. ಸ್ತನ ಬಂಧದ ಹಿಂಭಾಗ ಬಿಗಿಯಾಗಿರುತ್ತದೆ. ಇದು ನಿಮ್ಮ ಬೆನ್ನಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಒತ್ತಡ ಹೆಚ್ಚಾದಂತೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಸ್ತನದ ಮೇಲೆ ರಕ್ತದ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ಗಂಭೀರ ರೂಪ ಪಡೆಯಬಹುದು.
ಬೇಸಿಗೆಯಲ್ಲಿ ಬೆವರು ಸ್ತನದ ತುರಿಕೆಗೆ ಕಾರಣವಾಗುತ್ತದೆ. ಚರ್ಮದ ಸಿಪ್ಪೆ ಸುಲಿಯುವ ಸಾಧ್ಯತೆಯಿರುತ್ತದೆ. ಸ್ತನದ ಮೇಲೆ ಗಂಟು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಹಾಗಾಗಿ ಬಿಗಿಯಾದ ಬ್ರಾ ಧರಿಸಬೇಡಿ. ಜೊತೆಗೆ ರಾತ್ರಿ ಕಡ್ಡಾಯವಾಗಿ, ಹಗಲಿನಲ್ಲಿ ಸಾಧ್ಯವಾದ್ರೆ ಬ್ರಾ ಧರಿಸಬೇಡಿ.