ಆಧುನಿಕ ಜೀವನ ಶೈಲಿ, ಸೇವಿಸುವ ಪದಾರ್ಥಗಳು, ನಿರ್ವಹಣೆ ಸರಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಹಲ್ಲುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಬಣ್ಣ ಮಾಸಿದ ಹಲ್ಲುಗಳ ಬಗ್ಗೆಯೇ ಹೆಚ್ಚಿನವರಿಗೆ ಚಿಂತೆಯಾಗಿರುತ್ತದೆ.
ಜೋರಾಗಿ ನಗಲು ಕೂಡ ಮುಜುಗರ ಅನುಭವಿಸುತ್ತಾರೆ. ನಗುವಾಗ, ಹಲ್ಲು ಕಂಡರೆ ಏನಾದೀತು ಎಂಬ ಸಣ್ಣ ಆತಂಕ, ನಾಚಿಕೆ ಅವರನ್ನು ಕಾಡುತ್ತದೆ. ಅಂತಹವರಿಗಾಗಿಯೇ ಸರಳ ಉಪಾಯ ಇಲ್ಲಿದೆ. ನಿಮ್ಮ ಹಲ್ಲುಗಳು ಫಳ, ಫಳ ಹೊಳೆಯುವಂತಾಗಲು ನೀವು ಇದನ್ನು ಅನುಸರಿಸಿದರೆ ಸಾಕು.
ರಿಫೈಂಡ್ ಆಗದಿರುವ ಅಡುಗೆ ಎಣ್ಣೆಯನ್ನು ಒಂದು ಚಮಚದಷ್ಟು ತೆಗೆದುಕೊಂಡು, ಉಪ್ಪಿನೊಂದಿಗೆ ಮಿಶ್ರಣ ಮಾಡಿ ಹಲ್ಲುಗಳಿಗೆ ಸವರಬೇಕು. ಅದನ್ನು ನುಂಗದೇ, ಬಾಯಿಯೊಳಗೆ ಹಾಕಿಕೊಂಡು ಮುಕ್ಕಳಿಸಿ, ಉಗಿಯಿರಿ, ಬಳಿಕ ನೀರಿನಿಂದ ಬಾಯಿ ತೊಳೆದುಕೊಂಡು ಬ್ರಶ್ ಮಾಡಿ. ಹೀಗೆ ಕೆಲ ದಿನ ಮಾಡುವುದರಿಂದ ನಿಮ್ಮ ಹಲ್ಲುಗಳು ಹೊಳುಪು ಪಡೆದುಕೊಳ್ಳುತ್ತವೆ.