ಸ್ನಾನ ಕೋಣೆಯಲ್ಲಿ ಕಲೆಗಳಾದ್ರೆ ತೆಗೆಯೋದು ಕಷ್ಟ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕ್ಲೀನರ್ ಕೂಡ ಈ ಕಲೆ ತೆಗೆಯಲು ಸಾಧ್ಯವಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ಈ ಕಲೆಯನ್ನು ತೆಗೆಯಬಹುದು. ಜೊತೆಗೆ ಟೈಲ್ಸ್ ಮೇಲಿರುವ ಕಪ್ಪು ಕಲೆಯನ್ನು ಕೂಡ ಹೋಗಲಾಡಿಸಬಹುದು.
ಸ್ನಾನದ ಕೋಣೆಯಲ್ಲಿರು ಟೈಲ್ಸ್ ಮೇಲೆ ಕಲೆ ಬಿದ್ದರೆ ಹೋಗೋದಿಲ್ಲ. ಉಜ್ಜಿ ಉಜ್ಜಿ ಕೈ ನೋವಾಗುತ್ತೆಯೇ ವಿನಃ ಕಲೆ ಹೋಗೋದಿಲ್ಲ. ಹಾಗಿರುವಾಗ ಆಲೂಗಡ್ಡೆ ತುಣುಕನ್ನು ತೆಗೆದುಕೊಂಡು ಅದರ ಮೇಲೆ ಉಜ್ಜಿ. ನಂತ್ರ ಬಿಸಿ ನೀರಿನಲ್ಲಿ ತೊಳೆಯಿರಿ.
ಟೂತ್ಪೇಸ್ಟ್ ಕೂಡ ಬಾತ್ ರೂಂ ಕ್ಲೀನರ್ ಆಗಿ ಕೆಲಸ ಮಾಡುತ್ತದೆ. ಟೈಲ್ಸ್ ಜಾಯಿಂಟ್ ಮಾಡಿರುವ ಜಾಗಕ್ಕೆ ಟೂತ್ಪೇಸ್ಟ್ ಹಚ್ಚಿ ಉಜ್ಜಿದ್ರೆ ಸಾಕು.
ಟೈಲ್ಸ್ ಜಾಯಿಂಟ್ ಗೆ ನೀವು ಮೌತ್ ವಾಶ್ ಕೂಡ ಬಳಸಬಹುದು. ಇದು ಒಂದೇ ಬಾರಿ ಕ್ಲೀನ್ ಮಾಡುತ್ತದೆ.
ಆಲ್ಕೋಹಾಲ್ ಮೂಲಕ ವಾಶ್ ಬೇಸಿನ್, ಕನ್ನಡಿ, ಟೈಲ್ಸ್ ಮೇಲಾಗಿರುವ ಕಲೆಯನ್ನು ಹೋಗಲಾಡಿಸಬಹುದು.
ಸೋಡಾದಲ್ಲಿರುವ ಆಮ್ಲ ಟೈಲ್ಸ್ ಮೇಲಾಗಿರುವ ಕಲೆಯನ್ನು ತೆಗೆದು ಹಾಕುತ್ತದೆ. ಹಾಗಾಗಿ ಬಾತ್ ರೂಂ ಕ್ಲೀನ್ ಮಾಡುವ ವೇಳೆ ಸೋಡಾವನ್ನು ಬಳಸಿ.