
ಹೆಸರುಕಾಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಸೌಂದರ್ಯಕ್ಕೂ ಒಳ್ಳೆಯದು. ಮೊಡವೆ, ಕಲೆ, ಡ್ರೈ ಸ್ಕಿನ್ ಸಮಸ್ಯೆಯನ್ನು ನಿವಾರಿಸುತ್ತದೆ.
ಜತೆಗೆ ಕೂದಲಿನ ಆರೋಗ್ಯವನ್ನೂ ಕಾಪಾಡುತ್ತದೆ. ಹೆಸರುಕಾಳಿನಲ್ಲಿ ವಿಟಮಿನ್ ಎ ಹೇರಳವಾಗಿದೆ. ಹಾಗಾಗಿ ಇದನ್ನು ಬಳಸುವುದರಿಂದ ಚರ್ಮ ನಳನಳಿಸಿಸುತ್ತದೆ.
ಹೆಸರುಕಾಳಿನ ಫೇಸ್ ಪ್ಯಾಕ್ ಹಚ್ಚುವುದರಿಂದ ಡೆಡ್ ಸ್ಕಿನ್ ಅನ್ನು ನಿವಾರಿಸಿಕೊಳ್ಳಬಹುದು. ಹಾಗೇ ಮುಖದಲ್ಲಿರುವ ಕಲೆಗಳು ಕೂಡ ಕಡಿಮೆಯಾಗುತ್ತದೆ. 1 ಟೀ ಸ್ಪೂನ್ ಹೆಸರುಕಾಳಿನ ಹಿಟ್ಟು, 2 ಟೀ ಸ್ಪೂನ್ ಅಲೋವೆರಾ ಜ್ಯೂಸ್, 6 ಹನಿ ಲಿಂಬೆಹಣ್ಣಿನ ರಸ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೇಯೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
*1ಟೀ ಸ್ಪೂನ್ ಹೆಸರು ಕಾಳಿನ ಪುಡಿ, 1ಟೀ ಸ್ಪೂನ್ ಜೇನುತುಪ್ಪ ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆದರೆ ಮುಖದಲ್ಲಿ ಮೊಡವೆಯ ಸಮಸ್ಯೆಗೆ ಗುಡ್ ಬೈ ಹೇಳಬಹುದು.
* ಇನ್ನು ಹೆಸರುಕಾಳಿನ ಹಿಟ್ಟು ಹಾಗೂ ಅಕ್ಕಿ ಹಿಟ್ಟು ಇವೆರೆಡನ್ನು ಒಟ್ಟು ಸೇರಿಸಿ ಫೇಸ್ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಮುಖದ ಸ್ಕಿನ್ ಕಾಂತಿಯುತವಾಗುತ್ತದೆ. ಜತೆಗೆ ಕಲೆಗಳ ನಿವಾರಣೆಯಾಗುತ್ತದೆ. 1 ಟೇಬಲ್ ಸ್ಪೂನ್ ಹೆಸರುಕಾಳಿನ ಹಿಟ್ಟು, ½ ಟೇಬಲ್ ಸ್ಪೂನ್ ಅಕ್ಕಿಹಿಟ್ಟು, ½ ಟೀ ಸ್ಪೂನ್ ಪೈನಾಪಲ್ ಜ್ಯೂಸ್, ಹಾಲು. ಮೊದಲಿಗೆ ಹೆಸರುಕಾಳಿನ ಹಿಟ್ಟು, ಅಕ್ಕಿಹಿಟ್ಟು, ಪೈನಾಪಲ್ ಜ್ಯೂಸ್ ಇವಿಷ್ಟನ್ನು ಒಂದು ಬೌಲ್ ಗೆ ಹಾಕಿಕೊಂಡು ಮಿಶ್ರಣ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ಹಾಲು ಸೇರಿಸಿ ಪ್ಯಾಕ್ ಹದಕ್ಕೆ ಮಾಡಿಕೊಂಡು ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ.