ಮನೆಗೆ ತಂದ ಬ್ರೆಡ್ ಗೆ ಎರಡು ಮೂರು ದಿನಗಳಲ್ಲಿ ಫಂಗಸ್ ಸಮಸ್ಯೆ ಕಾಡಿ ಕಸದ ಡಬ್ಬಿಗೆ ಎಸೆಯುವ ಸ್ಥಿತಿಗೆ ಬರುತ್ತದೆ. ತಂದ ಎರಡು ದಿನಗಳೊಳಗೆ ಇದನ್ನು ಬಳಸಿ ಮುಗಿಸುವುದೇ ಒಳ್ಳೆಯದು.
ಬ್ರೆಡ್ ಮಾತ್ರವಲ್ಲ ಇತರ ಆಹಾರ ಪದಾರ್ಥಗಳ ಮೇಲೆ ಬೆಳ್ಳಗಿನ ಲೇಯರ್ ಬೆಳೆಯುವುದುಂಟು. ಇದು ಬೆಳೆದ ಯಾವುದೇ ಆಹಾರ ಪದಾರ್ಥಗಳನ್ನೂ ಸೇವಿಸುವುದು ಒಳ್ಳೆಯದಲ್ಲ. ತರಕಾರಿಗಳ ಮೇಲೆ ಬೂಸ್ಟ್ ಬೆಳೆದರೆ ತೊಳೆದು ತಿನ್ನಬಹುದು. ಆದರೆ ಆಹಾರ ಪದಾರ್ಥಗಳ ಮೇಲೆ ಇವು ಕಾಣಿಸಿಕೊಂಡರೆ ಕಡ್ಡಾಯವಾಗಿ ಎಸೆಯಲೇ ಬೇಕು.
ಇದನ್ನು ಮಕ್ಕಳು ಸ್ವಲ್ಪ ಸೇವಿಸಿದರೂ ಸಾಕು, ಅವರಿಗೆ ವಾಂತಿ, ಬೇಧಿಯಂತ ಸಮಸ್ಯೆಗಳನ್ನು ಕಾಣಿಸಿಕೊಳ್ಳುತ್ತವೆ. ಕೆಲವು ಮಕ್ಕಳಿಗೆ ಉಸಿರಾಟದ ತೊಂದರೆಯೂ ಕಂಡು ಬರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಿರುವ ಹಿರಿಯರಿಗೂ ಈ ಸಮಸ್ಯೆ ಕಾಣಿಸಿಕೊಳ್ಳುವುದುಂಟು.
ಇದರ ವಾಸನೆ ತೆಗೆದುಕೊಳ್ಳುವುದರಿಂದ ಆ ಬ್ಯಾಕ್ಟಿರಿಯಾಗಳು ನಿಮ್ಮ ದೇಹವನ್ನು ಹೊಕ್ಕು ಆರೋಗ್ಯ ಹಾಳು ಮಾಡಬಹುದು. ಫ್ರಿಜ್ ನಲ್ಲಿಟ್ಟ ವಸ್ತುವಿಗೆ ಹೀಗಾಗಿದ್ದರೆ ಫ್ರಿಡ್ಜ್ ಅನ್ನು ಸ್ವಚ್ಛ ಮಾಡುವುದು ಒಳ್ಳೆಯದು.