ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು ಸತ್ತ ಚರ್ಮವನ್ನು ನಿವಾರಿಸಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದರೆ ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸಬೇಡಿ. ಇದರಲ್ಲಿರುವ ಅಂಶಗಳಿಂದ ಗಂಭೀರ ಚರ್ಮದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಸ್ಕ್ರಬ್ ಗಳನ್ನು ಬಳಸುವುದರಿಂದ ಅದು ಚರ್ಮವನ್ನು ಎಕ್ಸ್ ಫೋಲಿಯೇಟಿಂಗ್ ಮಾಡುತ್ತದೆ. ಆದರೆ ಇದು ಅನೇಕ ಚರ್ಮ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ, ಶಿಲೀಂಧ್ರ ಸೋಂಕನ್ನು ಉಂಟುಮಾಡಬಹುದು. ಚರ್ಮವನ್ನು ಕೆರಳಿಸುತ್ತದೆ.
ಸ್ಕ್ರಬ್ ನಲ್ಲಿ ಅನೇಕ ರೀತಿಯ ಸೂಕ್ಷ್ಮಜೀವಿಗಳು ಇರುತ್ತದೆ. ಅದು ನಿಮಗೆ ಹಾನಿ ಮಾಡುತ್ತದೆ. ಇದು ಚರ್ಮದ ಮೇಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಕೆಲವೊಮ್ಮೆ ಸ್ಕ್ರಬ್ ನಿಂದ ಚರ್ಮವನ್ನು ಉಜ್ಜುವುದರಿಂದ ಚರ್ಮ ಕೆಂಪಾಗುತ್ತದೆ. ಮತ್ತು ಚರ್ಮದ ಮೇಲೆ ಕೆಂಪು ಕಲೆಗಳು ಮೂಡುತ್ತವೆ.
ಸ್ಕ್ರಬ್ ನಿಂದ ಉಜ್ಜುವುದರಿಂದ ಚರ್ಮದ ಮೇಲಿನ ಪದರ ಹರಿದು ಹೋಗಬಹುದು. ಇದು ಚರ್ಮದ ಮೇಲೆ ಗಾಯಗಳನ್ನು ಉಂಟು ಮಾಡಬಹುದು.