ಬೇಡದ ಕೂದಲು ತೆಗೆಯಲು ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳನ್ನು ಬಳಸ್ತಾರೆ. ಕೆಲವರು ರೇಜರ್ ಬಳಸ್ತಾರೆ. ವ್ಯಾಕ್ಸಿಂಗ್ ಗೆ ಹೆದರಿ ರೇಜರ್ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ರೇಜರ್ ಬಳಸುವ ಮೊದಲು ಇದನ್ನು ಗಮನದಲ್ಲಿಡಿ.
ರೇಜರ್ ಮೂಲಕ ಕಾಲಿನ ಕೂದಲನ್ನು ತೆಗೆಯುವುದು ಕೆಲ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ರೇಜರ್ ಬಳಕೆಯಿಂದ ಕೂದಲು ಮತ್ತಷ್ಟು ದಟ್ಟವಾಗಿ ಬೆಳೆಯುತ್ತದೆ. ಜೊತೆಗೆ ಚರ್ಮ ಒರಟಾಗಲು ಶುರುವಾಗುತ್ತದೆ.
ರೇಜರ್ ಬಳಸೋ ಮೊದಲು ಎಕ್ಸ್ಫೋಲಿಯಾಟ್ ಮಾಡಿದರೆ ಚರ್ಮವು ಮೃದುವಾಗುತ್ತದೆ. ನಂತರ ಕೂದಲನ್ನು ತೆಗೆಯುವುದು ಸುಲಭವಾಗುತ್ತದೆ. ಇದಕ್ಕಾಗಿ ಆಲಿವ್ ಎಣ್ಣೆ, ನಿಂಬೆ ರಸ ಬಳಸಿ.
ಶೇವಿಂಗ್ ಕ್ರೀಮ್ ನಿಂದ ಚರ್ಮ ಒರಟಾಗುತ್ತದೆ. ಹಾಗಾಗಿ ನೀವು ಕಂಡಿಷನರ್ ಬಳಸಬಹುದು. ಇದನ್ನ ಬಳಸೋದ್ರಿಂದ ಚರ್ಮ ಮೃದು ಮತ್ತು ಹೊಳಪು ಪಡೆಯುತ್ತದೆ.
ಕಾಲಿನ ಮೇಲೆ ಸಣ್ಣ ಕೂದಲುಗಳಿದ್ದರೆ ಅದನ್ನು ಕತ್ತರಿಸುವ ಅಗತ್ಯವಿಲ್ಲ. ಪದೇ ಪದೇ ರೇಜರ್ ಬಳಸಿ ಚರ್ಮ ಹಾಳು ಮಾಡಿಕೊಳ್ಳುವ ಬದಲು ಅದನ್ನು ಬಿಡುವುದು ಉತ್ತಮ.