ಕಲ್ಲಂಗಡಿ ಬೀಜದಿಂದ ಹತ್ತು ಹಲವು ಪ್ರಯೋಜನಗಳಿವೆ. ನಿಮ್ಮ ಮನೆಗೆ ತಂದ ಕಲ್ಲಂಗಡಿಯಲ್ಲಿರುವ ಬೀಜಗಳನ್ನು ಎಸೆಯದೆ ಒಣಗಿಸಿಡಿ. ಅದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ನೋಡೋಣ ಬನ್ನಿ.
ಕಲ್ಲಂಗಡಿ ಬೀಜದಲ್ಲಿ ಪೊಟ್ಯಾಶಿಯಂ, ಜಿಂಕ್ ಹೇರಳವಾಗಿದ್ದು ಬೆನ್ನೆಲುಬಿನ ಆರೋಗ್ಯವನ್ನು ಕಾಪಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಲೂ ನೆರವಾಗುತ್ತದೆ. ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಇದನ್ನು ಹೇಗೆ ಬಳಕೆ ಮಾಡುವುದು ಎಂಬುದನ್ನು ತಿಳಿಯೋಣ.
ಕಲ್ಲಂಗಡಿ ಬೀಜವನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಚಿಟಿಕೆ ಏಲಕ್ಕಿ ಸೇರಿಸಿ. ಬೆಲ್ಲ ಹಾಕಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ಬಹುಬೇಗ ದೂರವಾಗುತ್ತದೆ. ರಕ್ತಸಂಚಾರ ಸುಗಮವಾಗುತ್ತದೆ. ಕೂದಲು ಉದುರುವುದನ್ನು ತಡೆಗಟ್ಟಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನರಗಳನ್ನು ದೃಢಗೊಳಿಸುವ ಇದನ್ನು ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಸೇವಿಸುವುದರಿಂದ ದೇಹ ತೂಕವೂ ಕಡಿಮೆಯಾಗುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ. ಕ್ಯಾಲ್ಸಿಯಂ ಸಮಸ್ಯೆ ನಿಮ್ಮ ಸಮೀಪ ಸುಳಿಯದಂತೆ ನೋಡಿಕೊಳ್ಳುತ್ತವೆ.