![](https://kannadadunia.com/wp-content/uploads/2019/02/waterelon1_5073848_835x547-m.jpg)
ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ.
ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ.
– ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ.
– ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ.
– ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ ತೆಗೆದ ಎಣ್ಣೆ ಉತ್ತಮ. ಅಷ್ಟೇ ಅಲ್ಲ, ಚರ್ಮದ ಸೂಕ್ಷ್ಮ ರಂಧ್ರದಲ್ಲಿ ಇರುವ ಕೊಳೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ.
– ಈ ಎಣ್ಣೆಯಲ್ಲಿರುವ ಪ್ರೋಟೀನುಗಳು ಹಾಗೂ ಅಮೈನೋ ಆಮ್ಲಗಳು ಕೂದಲಿನ ಬುಡವನ್ನು ದೃಢಗೊಳಿಸುತ್ತವೆ. ಈ ಬೀಜಗಳನ್ನು ಹುರಿದು ಪುಡಿ ಮಾಡಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಮೆಲನಿನ್ ಎಂಬ ವರ್ಣ ದ್ರವ್ಯವನ್ನು ಹೆಚ್ಚಿಸಿ ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ.
– ಈ ಬೀಜಗಳಲ್ಲಿರುವ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
– ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಉರಿಯೂತದಿಂದ ಶರೀರದ ಯಾವುದಾದರೊಂದು ಭಾಗದಲ್ಲಿ ಬಾವು ಕಾಣಿಸಿಕೊಂಡರೆ, ಮುಕ್ಕಾಲು ಕಪ್ ಬಿಸಿ ನೀರಿಗೆ ಒಂದು ಚಮಚ ಈ ಪುಡಿ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಕಲಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಇದರಿಂದ ಬಾವು ಕಡಿಮೆಯಾಗುತ್ತದೆ.