ಅನೇಕ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತಾರೆ. ಮತ್ತೆ ಕೆಲ ಮಹಿಳೆಯರು ಬ್ರಾ ತೊಟ್ಟು ಮಲಗ್ತಾರೆ. ಕೆಲವರಿಗೆ ಇದ್ರಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.
ಬ್ರಾ ತೊಟ್ಟು ಮಲಗಿ ಇಲ್ಲ ಬಿಚ್ಚಿಟ್ಟು ಮಲಗಿ ಇದು ನಿಮ್ಮ ಅನುಕೂಲಕ್ಕೆ ಬಿಟ್ಟಿದ್ದು. ಯಾಕೆಂದ್ರೆ ಕೆಲವರಿಗೆ ಬ್ರಾ ಬಿಚ್ಚಿಟ್ಟು ಮಲಗಿದ್ರೆ ನಿದ್ರೆ ಬರುವುದಿಲ್ಲ. ಇದೇ ಕಾರಣಕ್ಕೆ ಅನಿವಾರ್ಯವಾಗಿ ಅವ್ರು ಬ್ರಾ ಧರಿಸ್ತಾರೆ. ಬ್ರಾ ತೊಟ್ಟು ಮಲಗಿದ್ರೆ ನಷ್ಟವೇನಿಲ್ಲ. ಆದ್ರೆ ಬ್ರಾ ತುಂಬಾ ಬಿಗಿಯಾಗಿರದಂತೆ ನೋಡಿಕೊಳ್ಳಬೇಕು. ತುಂಬಾ ಬಿಗಿಯಾಗಿರುವ ಬ್ರಾವನ್ನು ಧರಿಸಬೇಡಿ.
ಬಿಗಿಯಾದ ಬ್ರಾ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ವಿಜ್ಞಾನಿಗಳ ಪ್ರಕಾರ ಬಿಗಿಯಾದ ಬ್ರಾ ಧರಿಸಿ ಮಲಗಿದ್ರೆ ದೇಹದ ಯಾವುದೇ ಭಾಗದಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಆದ್ರೆ ಇದು ಕ್ಯಾನ್ಸರ್ ಅಲ್ಲ. ಆರೋಗ್ಯದ ದೃಷ್ಟಿಯಿಂದ ರಾತ್ರಿ ಮಲಗುವಾಗ ಬ್ರಾ ಧರಿಸಲೇಬೇಕು ಎನ್ನುವವರು ಸಡಿಲವಾದ ಅಥವಾ ಸ್ಪೋರ್ಟ್ಸ್ ಬ್ರಾ ಧರಿಸಿ. ಹಗುರವಾದ ಹಾಗೂ ಮೃದುವಾದ ಬ್ರಾ ಧರಿಸಿ.