ನಿಮ್ಮ ಅಕ್ಕಪಕ್ಕದಲ್ಲಿ ಕುಳಿತವರು ಕಾಲನ್ನು ಪದೇ ಪದೇ ಅಲ್ಲಾಡಿಸುತ್ತಿರುವುದನ್ನು ನೀವು ನೋಡಿರಬಹುದು. ಅಥವಾ ನೀವೇ ಪದೇ ಪದೇ ಕಾಲನ್ನು ಅಲ್ಲಾಡಿಸುತ್ತೀರಾದರೆ ಎಚ್ಚರ. ಇದು ರೆಸ್ಟ್ಲೆಸ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ರೆಸ್ಟ್ಲೆಸ್ ಸಿಂಡ್ರೋಮ್ ನಿಂದ ಬಳಲುವವರಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಕಬ್ಬಿಣದ ಕೊರತೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರೆಸ್ಟ್ಲೆಸ್ ಸಿಂಡ್ರೋಮ್ ನರ ವೈಜ್ಞಾನಿಕ ಖಾಯಿಲೆಯಾಗಿದೆ. ಪದೇ ಪದೇ ಕಾಲು ಅಲುಗಾಡಿಸುವುದರಿಂದ ವ್ಯಕ್ತಿಗೆ ನೆಮ್ಮದಿ ಸಿಗುತ್ತದೆ. ರಾತ್ರಿ ನಿದ್ರೆಯಲ್ಲಿ ಕೂಡ ಕೆಲವರು ಕಾಲು ಅಲುಗಾಡಿಸುತ್ತಾರೆ. 200-300 ಬಾರಿ ಕಾಲು ಅಲುಗಾಡಿಸಿದ ನಂತ್ರ ಕೆಲವರಿಗೆ ನಿದ್ರೆ ಬರುವುದಿದೆ.
ಈ ಖಾಯಿಲೆ ಶೇಕಡಾ 10 ರಷ್ಟು ಮಂದಿಯಲ್ಲಿ ಕಾಡುತ್ತದೆ. ಸಾಮಾನ್ಯವಾಗಿ 35 ವರ್ಷ ವಯಸ್ಸಿನ ನಂತ್ರ ಈ ಖಾಯಿಲೆ ಕಾಣಿಸಿಕೊಳ್ಳುವುದು ಹೆಚ್ಚು. ಕಬ್ಬಿಣದ ಕೊರತೆ ಜೊತೆಯಲ್ಲಿ ಮೂತ್ರಪಿಂಡ ಸಮಸ್ಯೆ. ಗರ್ಭವತಿಯರಲ್ಲಿ ಕೊನೆ ತಿಂಗಳಿನಲ್ಲಾಗುವ ಹಾರ್ಮೋನ್ ಬದಲಾವಣೆಗಳಿಂದಲೂ ಇದು ಕಾಣಿಸಿಕೊಳ್ಳುತ್ತದೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ ನಿದ್ರೆಗೆಟ್ಟವರು ಬೆಳಿಗ್ಗೆ ತೂಕಡಿಸುತ್ತಾರೆ. ರಕ್ತ ಪರೀಕ್ಷೆ ಮೂಲಕ ಇದನ್ನು ಪತ್ತೆ ಹಚ್ಚಲಾಗುತ್ತದೆ. ಭಯಪಡುವ ಅಗತ್ಯವಿಲ್ಲ. ಇದಕ್ಕೆ ಸೂಕ್ತ ಚಿಕಿತ್ಸೆ ಇದೆ.