ಎಟಿಎಂ ಪಿನ್, ಆಧಾರ್ ಕಾರ್ಡ್ ವಿವರಗಳು, ಪಾನ್ ಸಂಖ್ಯೆ ಸೇರಿದಂತೆ ಇನ್ನಿತರ ಸೂಕ್ಷ್ಮ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಬಹುತೇಕ ಮಂದಿ ನಿರ್ಲಕ್ಷ್ಯ ತೋರುವ ಕಾರಣ ಆನ್ಲೈನ್ ವಂಚಕರಿಗೆ ಭರಪೂರ ಅವಕಾಶಗಗಳು ಸೃಷ್ಟಿಯಾಗುತ್ತಿವೆ.
ಬಳಕೆದಾರರ ಮೊಬೈಲ್‌ಗಳು ಹಾಗೂ ಪಿಸಿಗಳಿಂದ ಖಾಸಗಿ ಹಾಗೂ ವೃತ್ತಿ ಸಂಬಂಧಿ ಮಾಹಿತಿಗಳನ್ನು ಕದಿಯಲು ಇ-ಮೇಲ್/ಎಸ್‌ಎಂಎಸ್‌ಗಳ ಮೂಲಕ ಫಿಶಿಂಗ್ ಮಾಡುವುದು ಆನ್ಲೈನ್ ಚೋರರ ಮೆಚ್ಚಿನ ಮಾರ್ಗವಾಗಿದ್ದರೂ ಸಹ ಈ ಬಗ್ಗೆ ಜನಸಾಮಾನ್ಯರಲ್ಲಿ ಗಂಭೀರತೆ ಮೂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಲೋಕಲ್ ಸರ್ಕಲ್ಸ್ ಹೆಸರಿನ ಸಮೂಹವೊಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.
ದೇಶದ 393 ಜಿಲ್ಲೆಗಳಲ್ಲಿ ನಡೆಸಲಾದ ಈ ಸರ್ವೇಯಲ್ಲಿ 24,000+ ಪ್ರತಿಕ್ರಿಯೆಗಳು ಬಂದಿವೆ.
ಇವರ ಪೈಕಿ ಶೇ.27ನಷ್ಟು ಮಂದಿ ತಮ್ಮ ಎಟಿಎಂ ಪಿನ್ ಅನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ. ಶೇ.4 ಮಂದಿ ಈ ವಿವರಗಳನ್ನು ತಮ್ಮ ಮನೆಗೆಲಸದವರೊಂದಿಗೆ ಶೇರ್ ಮಾಡಿಕೊಂಡಿದ್ದಾಗಿ ತಿಳಿಸಿದರೆ, ಶೇ.65ಮಂದಿ ಈ ವಿವರಗಳನ್ನು ತಾವು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದಿದ್ದಾರೆ.
BREAKING: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಗೆ ಗೃಹ ಬಂಧನ
ಬ್ಯಾಂಕ್ ಖಾತೆ, ಡೆಬಿಟ್/ಕ್ರೆಡಿಟ್ ಕಾರ್ಡ್ ಸಿವಿವಿ, ಆಧಾರ್ ಸಂಖ್ಯೆ, ಪಾನ್ ಸಂಖ್ಯೆಗಳಂಥ ಸೂಕ್ಷ್ಮ ವಿವರಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬ ಪ್ರಶ್ನೆಗೆ ಶೇ.21 ಮಂದಿ ಈ ವಿವರಗಳನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುವುದಾಗಿ ತಿಳಿಸಿದ್ದಾರೆ. ಶೇ.39 ಮಂದಿ ಇವನ್ನೆಲ್ಲಾ ಕಾಗದದ ಮೇಲೆ ಲಿಖಿತ ರೂಪದಲ್ಲಿ ಸ್ಟೋರ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಶೇ.33 ಮಂದಿ ಮೇಲ್ಕಂಡ ವಿವರಗಳನ್ನು ತಮ್ಮ ಫೋನ್‌ಗಳು, ಇ-ಮೇಲ್ ಅಥವಾ ಕಂಪ್ಯೂಟರ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ಇವರಲ್ಲಿ ಶೇ. 11 ಮಂದಿ ಸೂಕ್ಷ್ಮ ಮಾಹಿತಿಗಳನ್ನು ತಮ್ಮ ಫೋನ್‌ಗಳ ಸಂಪರ್ಕ ಪಟ್ಟಿಯಲ್ಲಿಟ್ಟುಕೊಂಡಿರುವುದಾಗಿಯೂ ಹೇಳಿಕೊಂಡಿದ್ದಾರೆ !
ಸ್ಮಾರ್ಟ್‌ಫೋನ್‌ನಲ್ಲಿ ಬಳಸುವ ಬಹುತೇಕ ಅಪ್ಲಿಕೇಶನ್‌ಗಳು ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್‌ಗೆ ಆಕ್ಸೆಸ್ ಪಡೆಯಲು ಅನುಮತಿ ಕೋರುತ್ತವೆ. ಹೀಗಾಗಿ ಕಳಪೆ ಗುಣಮಟ್ಟದ ಭದ್ರತಾ ವ್ಯವಸ್ಥೆಗಳಿರುವ ಅಪ್ಲಿಕೇಶನ್‌ಗಳಿಂದಾಗಿ ಖಾಸಗಿ ವಿವರಗಳು ಲೀಕ್ ಆಗುವ ಸಾಧ್ಯತೆಗಳು ಇರುತ್ತವೆ.
ಸಾರ್ವಜನಿಕರಲ್ಲಿ ಡಿಜಿಟಲ್ ಸಾಕ್ಷರತೆ ಮೂಡಿಸಲು ಅಭಿಯಾನಗಳನ್ನು ರಿಸರ್ವ್ ಬ್ಯಾಂಕ್ ಹಾಗೂ ಇತರ ಬ್ಯಾಂಕುಗಳು ಹಮ್ಮಿಕೊಳ್ಳಬೇಕೆಂದು ಇದೇ ಸರ್ವೇಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ; ಮೇಲ್ಕಂಡ ಸೂಕ್ಷ್ಮ ವಿವರಗಳನ್ನು ಅನ್ಯರಿಗೆ ಗೊತ್ತಾಗದಂತೆ ಕಾಪಾಡಿಕೊಳ್ಳಲು ಗೌಪ್ಯ ಮಾಹಿತಿಗಳ ಸಂಗ್ರಹಣೆಗೆ ಇರುವ ವ್ಯವಸ್ಥೆಗಳನ್ನು ಬಳಕೆದಾರರು ಅರಿತು ಬಳಸಬೇಕೆಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.