ಅಡುಗೆ ಸೋಡಾ ಅಡುಗೆಗಷ್ಟೇ ಅಲ್ಲದೇ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರೋದು ಗೊತ್ತೇ ಇದೆ. ಒಡವೆಗೆ ಹೊಳಪು ತರಲು, ಜಿಡ್ಡು, ಕೊಳೆಕಾರಕಗಳನ್ನು ನಿವಾರಿಸಲು ಬೇಕೇ ಬೇಕು. ಇನ್ನೂ ಇಡ್ಲಿ ಮೃದುವಾಗಿ ಆಗಬೇಕು ಅಂದ್ರೆ ಸೋಡಾ ಬೇಕು. ಬೋಂಡಾ ಗರಿಗರಿ ಆಗಲೂ ಅಡುಗೆ ಸೋಡಾ ಬೇಕು. ಆದರೆ ಅತಿಯಾದರೆ ಅಮೃತವೂ ವಿಷವೇ ಅಲ್ಲವೇ?
ಅಡುಗೆ ಸೋಡಾದಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಹಾನಿಕಾರ. ಹೃದ್ರೋಗ ಇರುವವರಂತೂ ಅಡುಗೆ ಸೋಡಾ ಇಂದ ಆದಷ್ಟು ದೂರ ಇರೋದೇ ಒಳ್ಳೆಯದು.
ಇತ್ತೀಚೆಗೆ ಸಣ್ಣ ವಯಸ್ಸಿಗೆ ಹೃದಯಾಘಾತ ಹೆಚ್ಚಾಗುತ್ತಿರುವುದರಿಂದ ಸೋಡಿಯಂ ಬಳಕೆಯ ಬಗ್ಗೆ ಎಚ್ಚರ ವಹಿಸುವುದು ಅತಿ ಅಗತ್ಯ.
ಇನ್ನೂ ಹೋಟೆಲ್ ಆಹಾರ ಪದಾರ್ಥಗಳಲ್ಲಿ ಸೋಡಾ ಬಳಕೆ ಇದ್ದೆ ಇರುತ್ತೆ. ಹೋಟೆಲ್ ನಲ್ಲಿ ಪದೇ ಪದೇ ಊಟ ಮಾಡುವವರಿಗೆ ಹೊಟ್ಟೆ ಉಬ್ಬರದ ಅನುಭವ ಆಗುತ್ತದೆ. ಅಂಥಹ ಸಮಯದಲ್ಲಿ ಮನೆ ಅಡುಗೆಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು, ಅಡುಗೆ ಸೋಡಾ ಇನ್ನು ಬೇಡಾ ಎಂದು ನಿರ್ಧರಿಸಿ.