ಗ್ಯಾಸ್ಟ್ರಿಕ್ ಸದ್ಯ ಎಲ್ಲರನ್ನು ಕಾಡುವ ಸಮಸ್ಯೆ. ರಾತ್ರಿಯಾಗ್ತಿದ್ದಂತೆ ಹೊಟ್ಟೆ ಉಬ್ಬರ ಶುರುವಾಗುತ್ತದೆ. ಕೆಲವರಿಗೆ ಪದೇ ಪದೇ ಗ್ಯಾಸ್ ಹೊರಗೆ ಬರ್ತಿರುತ್ತದೆ.
ಸಾರ್ವಜನಿಕ ಪ್ರದೇಶದಲ್ಲಿ ಗ್ಯಾಸ್ ಬಿಡುವುದು ಅನೇಕರಿಗೆ ಮುಜುಗರವನ್ನುಂಟು ಮಾಡುತ್ತದೆ. ಗ್ಯಾಸ್ಟ್ರಿಕ್ ಸಾಮಾನ್ಯ ಸಮಸ್ಯೆಯಾದ್ರೂ ಅದ್ರಿಂದ ಅನೇಕ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು.
ಗ್ಯಾಸ್ಟ್ರಿಕ್ ನಿಂದ ಬಳಲುವವರು ಒತ್ತಡ ಮತ್ತು ಆತಂಕದಿಂದ ಬಳಲುತ್ತಾರೆ. ಒತ್ತಡ ಹಾಗೂ ಗ್ಯಾಸ್ಟ್ರಿಕ್ ಗೆ ಸಂಬಂಧವಿದೆ. ಒತ್ತಡ ಹೆಚ್ಚಾದ್ರೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಗ್ಯಾಸ್ಟ್ರಿಕ್ ಹೆಚ್ಚಾದ್ರೂ ಒತ್ತಡ ಜಾಸ್ತಿಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು ಯಾವಾಗ್ಲೂ, ಕಿರಿಕಿರಿ ಅನುಭವಿಸುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಈ ಸಮಸ್ಯೆಯಿಂದ ಬಳಲುವವರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ.
ಅಧ್ಯಯನದ ಪ್ರಕಾರ, ಪ್ರತಿಯೊಬ್ಬರ ಹೊಟ್ಟೆಯಲ್ಲೂ ಗ್ಯಾಸ್ ರೂಪಗೊಳ್ಳುತ್ತದೆ. ನಾವು ಸೇವನೆ ಮಾಡುವ ಆಹಾರ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಕಾರಣವಾಗುತ್ತದೆ. ಸೇಬು, ಪೇರಳೆ, ಬ್ರೆಡ್, ಮೂಲಂಗಿ, ಧಾನ್ಯಗಳು ಮತ್ತು ನೂಡಲ್ಸ್ ಇತ್ಯಾದಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.
ದಿನದಲ್ಲಿ ವ್ಯಕ್ತಿಯೊಬ್ಬನಲ್ಲಿ ಸರಾಸರಿ ದಿನಕ್ಕೆ 5 ರಿಂದ 15 ಬಾರಿ ಗ್ಯಾಸ್ ಬಿಡುಗಡೆ ಮಾಡುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಊಟ ಮತ್ತು ಪಾನೀಯ ಸೇವನೆ ನಂತ್ರ ಗ್ಯಾಸ್, ಹೊಟ್ಟೆ ಉಬ್ಬರ ಬಂದ್ರೆ ಅದು ಕೊಲೊನ್ ಕ್ಯಾನ್ಸರ್ ನ ಲಕ್ಷಣವಾಗುವ ಸಾಧ್ಯತೆಯಿದೆ.
ಅತಿಸಾರ, ಮಲಬದ್ಧತೆ, ಉಬ್ಬುವುದು, ಸಾಮಾನ್ಯಕ್ಕಿಂತ ಹೆಚ್ಚು ಗ್ಯಾಸ್ ಮತ್ತು ಹೊಟ್ಟೆ ಉಬ್ಬರವಿದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದು ಹೊಟ್ಟೆ ಕ್ಯಾನ್ಸರ್ ಗೆ ಕಾರಣವಾಗಬಹುದು. ಇದು ಮಲ ವಿಸರ್ಜನೆ ಸಮಸ್ಯೆಗೂ ಕಾರಣವಾಗುತ್ತದೆ. ಪದೇ ಪದೇ ಮಲ ವಿಸರ್ಜನೆಗೆ ಹೋಗ್ತಿದ್ದರೆ ಅಪಾಯ ಹೆಚ್ಚಾಗಿದೆ ಎಂದರ್ಥ.
ನಿರಂತರ ಹೊಟ್ಟೆ ನೋವು, ಊತ, ಆಗಾಗ್ಗೆ ಮಲಬದ್ಧತೆ ಅಥವಾ ಅತಿಸಾರವಾಗ್ತಿದ್ದರೆ ಎಚ್ಚರ. ಏಕಾಏಕಿ ತೂಕ ಕಡಿಮೆಯಾಗ್ತಿದ್ದರೆ, ಮಲದಲ್ಲಿ ರಕ್ತ ಬರ್ತಿದ್ದರೆ, ಮಲದ ಬಣ್ಣ ಬದಲಾಗಿದ್ದರೆ ಅಥವಾ ಹಸಿವು ಆಗ್ತಿಲ್ಲವೆಂದ್ರೆ ಪರೀಕ್ಷೆ ಮಾಡಿಸಿಕೊಳ್ಳಿ. ಹೊಟ್ಟೆಯಲ್ಲಿ ಗಡ್ಡೆಯಂತ ವಸ್ತು ಕಾಣಿಸಿಕೊಂಡ್ರೆ ತಕ್ಷಣ ಚಿಕಿತ್ಸೆ ಪಡೆಯಿರಿ.
ಹೊಟ್ಟೆಯ ಕ್ಯಾನ್ಸರ್ ನಿಂದ ರಕ್ಷಣೆ ಬೇಕೆನ್ನುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಆಹಾರ ಸೇವನೆ ಮಾಡುವಾಗ ಬಾಯಿ ಮುಚ್ಚಿ, ಆಹಾರವನ್ನು ನಿಧಾನವಾಗಿ ಅಗೆದು ತಿನ್ನಿರಿ. ಒಂದೇ ಬಾರಿ ಅತಿ ಊಟ ಮಾಡುವ ಬದಲು, ನಿಯಮಿತವಾಗಿ ಸ್ವಲ್ಪ ಸ್ವಲ್ಪ ಸೇವನೆ ಮಾಡಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಪುದೀನ ಚಹಾವನ್ನು ಆಗಾಗ ಕುಡಿಯಿರಿ. ಧೂಮಪಾನದಿಂದ ದೂರವಿರಿ. ಮಸಾಲೆಯುಕ್ತ ಆಹಾರ ಸೇವಿಸಬೇಡಿ.