
ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಬಿಜೆಪಿ ನಾಯಕ ಮತ್ತು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ವ್ಯಕ್ತಿಯೊಬ್ಬ ಬೈಸಿಕಲ್ ಸವಾರಿ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ಒಬ್ಬ ವ್ಯಕ್ತಿಯನ್ನು ಸಾಗಿಸಲು ನಿಮಗೆ ಕಾರು ಏಕೆ ಬೇಕು, ಸೈಕಲ್ ಸಾಕಲ್ಲವೆ ಎಂದು ಅವರು ಬರೆದುಕೊಂಡಿದ್ದಾರೆ. ಬೈಸಿಕಲ್ನಲ್ಲಿ ಹೋಗುವ ವ್ಯಕ್ತಿ ಹಿಂದೆ ಫಲಕ ಹಾಕಿಕೊಂಡಿದ್ದು ಇದೇ ಪ್ರಶ್ನೆಯನ್ನು ಅದರಲ್ಲಿ ಕೇಳಿರುವುದನ್ನು ವಿಡಿಯೋದಲ್ಲಿ ನೋಡಬಹುದು.
“ಎಲ್ಲರಿಗೂ ಉತ್ತಮ ಪರಿಸರ, ಆರೋಗ್ಯ ಬೇಕು. ಆದರೆ ಯಾರೂ ಇದನ್ನು ಕಾರ್ಯಗತಗೊಳಿಸುವುದಿಲ್ಲ” ಎಂದು ಬಳಕೆದಾರರು ವೀಡಿಯೊದಲ್ಲಿ ಕಮೆಂಟ್ ಮಾಡಿದ್ದಾರೆ. “ಭಾರತದಲ್ಲಿ ಡ್ರೈವಿಂಗ್ ಸೆನ್ಸ್ ಚೆನ್ನಾಗಿ ಬರಬೇಕು. ದೊಡ್ಡ ವಾಹನ ಚಾಲಕರು ಸಣ್ಣ ವಾಹನ ಚಾಲಕರನ್ನು ಗೌರವಿಸಲು ಪ್ರಾರಂಭಿಸಿದರೆ ಮಾತ್ರ ಬೈಸಿಕಲ್ನಲ್ಲಿ ಹೋಗಲು ಸಾಧ್ಯ ಎಂದು ಇನ್ನು ಹಲವರು ಬರೆದುಕೊಂಡಿದ್ದಾರೆ.