ಗುಂಗುರು ಕೂದಲು ಹೊಂದಿರುವವರು ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಸ್ಟ್ರೈಟ್ ಮಾಡಿಸಿಕೊಳ್ಳುವುದನ್ನು ನೀವು ಕಂಡಿರಬಹುದು. ಗುಂಗುರು ಕೂದಲು ಕೂಡಾ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡಬಹುದು.
ಗ್ಲಿಸರಿನ್ ಹೊಂದಿರುವ ಶ್ಯಾಂಪೂ ಬಳಸಿ. ಇದರ ಬಳಕೆಯಿಂದ ಕೂದಲು ಸಿಕ್ಕಾಗುವುದು ತಪ್ಪುತ್ತದೆ. ಕಂಡಿಷನರ್ ಅನ್ನು ಮರೆಯದೆ ಬಳಸಿ. ಪ್ರತಿದಿನ ಶ್ಯಾಂಪು ಬಳಸಿ ತಲೆ ತೊಳೆಯುವುದು ಒಳ್ಳೆಯದಲ್ಲ. ವಾರಕ್ಕೆ ಎರಡು ಬಾರಿ ಕಂಡಿಷನರ್ ಹಾಕಿದರೆ ಸಾಕು.
ಡ್ರೈಯರ್ ಬಳಸಿ ಕೂದಲು ಒಣಗಿಸುವ ಬದಲು ಗಾಳಿಯಲ್ಲೇ ಒಣಗಲು ಬಿಡಿ. ಇಲ್ಲವಾದರೆ ಕೂದಲು ಹೆಚ್ಚು ಹಾರುವಂತಾದೀತು. ಟವೆಲ್ ನಿಂದ ಸರಿಯಾಗಿ ಕೂದಲು ಒರೆಸಿ. ಗುಂಗುರು ಕೂದಲಿನೊಳಗೆ ನೀರು ಹೆಚ್ಚು ನಿಂತು ಶೀತ ಕೆಮ್ಮು ಸಮಸ್ಯೆಗಳು ಕಂಡು ಬಂದಾವು.
ಗುಂಗುರು ಕೂದಲು ನೋಡಲು ಆಕರ್ಷಣೀಯ ಹಾಗೂ ನಿಮಗೆ ವಿಭಿನ್ನ ಲುಕ್ ನೀಡುತ್ತದೆ. ಗುಂಗುರು ಕೂದಲು ತೆಳುವಾದರೂ ದಪ್ಪ ಕೂದಲಿರುವ ಅನುಭವ ನೀಡುತ್ತದೆ. ಇದೆ ಕಾರಣಕ್ಕೆ ಹೆಚ್ಚಿನ ಮಂದಿ ಗುಂಗುರು ಕೂದಲನ್ನು ಲೈಕ್ ಮಾಡುತ್ತಾರೆ.