ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರವೂ ಒಂದೊಂದು ದೇವರಿಗೆ ಮೀಸಲಿರುತ್ತದೆ. ಇದೇ ಕಾರಣಕ್ಕೆ ದಿನಕ್ಕನುಗುಣವಾಗಿ ಆಯಾ ದೇವರ ಪೂಜೆ ನೆರವೇರುತ್ತದೆ.
ವಾರದ ಜೊತೆ ಶುಭ ಕಾರ್ಯಕ್ಕೆ ಶುಭ ಮುಹೂರ್ತವನ್ನು ನೋಡಲಾಗುತ್ತದೆ. ಶುಭ ದಿನ, ಶುಭ ಮುಹೂರ್ತದಲ್ಲಿ ಮಾಡಿದ ಕೆಲಸ ಫಲ ನೀಡುತ್ತದೆ ಎಂದೂ ನಂಬಲಾಗಿದೆ. ಹಾಗೆ ಕೆಲವೊಂದು ಕೆಲಸಗಳನ್ನು ಕೆಲವೊಂದು ದಿನ ಮಾಡಬಾರದು.
ಶಾಸ್ತ್ರಗಳ ಪ್ರಕಾರ ಭಾನುವಾರ ತುಳಸಿಯನ್ನು ಕೀಳಬಾರದು. ಭಾನುವಾರ ಭಗವಂತ ವಿಷ್ಣುವಿನ ದಿನವಾಗಿದೆ. ತುಳಸಿಯನ್ನು ಭಗವಂತ ವಿಷ್ಣುವಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಭಾನುವಾರ ತುಳಸಿಯನ್ನು ಕತ್ತರಿಸಬಾರದು. ವಿಷ್ಣುವನ್ನು ತುಳಸಿ ಪ್ರಿಯನನ್ನಾಗಿ ಮಾಡಿದ ಖ್ಯಾತಿ ಗಣೇಶನಿಗೆ ಸಲ್ಲುತ್ತದೆ.
ಗುರುವಾರ ತುಳಸಿಯನ್ನು ನೆಡಬೇಕು. ಕಾರ್ತಿಕ ಮಾಸದಲ್ಲಿ ತುಳಸಿ ನೆಡುವುದು ಶುಭಕರ. ತುಳಸಿಯನ್ನು ಮನೆ ಹಿಂದಲ್ಲ ಮನೆ ಮುಂದೆ ಇಡಬೇಕು. ಗಣೇಶನ ವರದಿಂದ ವಿಷ್ಣು ಹಾಗೂ ಶ್ರೀಕೃಷ್ಣನಿಗೆ ತುಳಸಿ ಪ್ರಿಯವಾಗಿದೆ. ಮೋಕ್ಷ ಪ್ರಾಪ್ತಿಗೂ ಇದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.