ಎರಡು ಮನಸ್ಸುಗಳ ಜೊತೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ ಮದುವೆ. ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ ಮದುವೆ. ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ.
ಮದುವೆಯಾದ್ಮೇಲೆ ಹನಿಮೂನ್ ಗೆ ಎಲ್ಲಿಗೆ ಹೋಗಬೇಕೆಂಬ ಬಗ್ಗೆಯೂ ಜೋಡಿ ಮಧ್ಯೆ ಮೊದಲೇ ಚರ್ಚೆ ನಡೆದಿರುತ್ತದೆ. ಹನಿಮೂನ್ ಹೆಸರಿನಲ್ಲಿ ದೇಶ, ವಿದೇಶವನ್ನು ಸುತ್ತಿ ಬರ್ತಾರೆ ಜೋಡಿ. ಮದುವೆ ನಂತ್ರ ಹನಿಮೂನ್ ಗೆ ಹೋಗೋದ್ರಿಂದ ಸಾಕಷ್ಟು ಲಾಭವಿದೆ.
ಮದುವೆಯಾದ್ಮೇಲೆ ಹೊಸ ಜವಾಬ್ದಾರಿಗಳು ಮೈಮೇಲೆ ಬೀಳುತ್ತದೆ. ಸಂಗಾತಿ, ಸಂಸಾರವನ್ನು ನೋಡಿಕೊಳ್ಳಬೇಕಾಗುತ್ತದೆ. ಅದಕ್ಕಿಂತ ಮೊದಲು ಇಬ್ಬರು ಆರಾಮಾಗಿ ಸ್ವಲ್ಪ ಸಮಯ ಕಳೆಯಲಿ ಎನ್ನುವ ಕಾರಣಕ್ಕೆ ಕುಟುಂಬಸ್ಥರೆಲ್ಲ ಸೇರಿ ನವ ದಂಪತಿಯನ್ನು ಹನಿಮೂನ್ ಗೆ ಕಳುಹಿಸುತ್ತಾರೆ.
ಹನಿಮೂನ್ ಪತಿ-ಪತ್ನಿ ಮಧ್ಯೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹನಿಮೂನ್ ಎಂದ್ರೆ ಸೆಕ್ಸ್ ಎಂದು ಅನೇಕರು ಭಾವಿಸಿದ್ದಾರೆ. ಆದ್ರೆ ಅದು ತಪ್ಪು. ಹನಿಮೂನ್ ಒಂದು ಭಾಗ ಮಾತ್ರ ಸೆಕ್ಸ್. ಹನಿಮೂನ್ ನಲ್ಲಿ ಪತಿ-ಪತ್ನಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಸಂಗಾತಿ ಇಷ್ಟ ಕಷ್ಟಗಳನ್ನು ಈ ವೇಳೆ ನೀವು ತಿಳಿಯಬಹುದಾಗಿದೆ.
ಹನಿಮೂನ್ ಜೀವನ ಪರ್ಯಂತ ಸುಂದರ ನೆನಪಾಗಿ ನಿಮ್ಮ ಬಳಿ ಇರುವಂತಹದ್ದು. ಮದುವೆಯಾದ ಆರಂಭದ ದಿನಗಳನ್ನು ನೀವು ಎಲ್ಲಿ ಕಳೆದ್ರಿ? ಹೇಗೆ ಕಳೆದ್ರಿ ಎಂಬುದನ್ನು ಮುಂದಿನ ದಿನಗಳಲ್ಲಿ ನೆನಪು ಮಾಡಿಕೊಂಡು ಖುಷಿ ಪಡಬಹುದು.
ಕೆಲವರು ಇದನ್ನು ರೋಮ್ಯಾಂಟಿಕ್ ಎಂದುಕೊಂಡ್ರೆ ಮತ್ತೆ ಕೆಲವರು ಮದುವೆ ನಂತ್ರ ರಿಲ್ಯಾಕ್ಸ್ ಆಗಲು ಹನಿಮೂನ್ ಎಂದುಕೊಂಡಿದ್ದಾರೆ. ಹನಿಮೂನ್ ಬಗ್ಗೆ ಅವ್ರದೆ ಆದ ಕಲ್ಪನೆ, ನಂಬಿಕೆಗಳಿವೆ.