ಬಾದಾಮಿ ದೇಹ ಹಾಗೂ ಮನಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರೋ ಪ್ರೋಟೀನ್, ಫೈಬರ್, ವಿಟಾಮಿನ್ ಇ, ಒಮೇಗಾ3, ಹಾಗೂ ಒಮೇಗಾ 6 ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಜಿಂಕ್ ಇವೆಲ್ಲಾ ದೇಹಕ್ಕೆ ಅಗತ್ಯವಾಗಿ ಬೇಕಾದವು. ಆದರೆ ಕಚ್ಚಾ ಬಾದಾಮಿ ಈ ಬೇಸಿಗೆಯಲ್ಲಿ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.
ಬಿರುಬೇಸಿಗೆಯಲ್ಲಿ ಕಚ್ಚಾ ಬಾದಾಮಿಯನ್ನು ಅಂದರೆ ನೆನೆಸಿರದ ಬಾದಾಮಿಯನ್ನು ತಿಂದರೆ ಏನಾಗುತ್ತೆ ಅನ್ನೋದನ್ನು ನೋಡೋಣ. ಕಚ್ಚಾ ಬಾದಾಮಿ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಅಡೆತಡೆ ಉಂಟು ಮಾಡುತ್ತವೆ. ಅಲ್ಲದೇ, ಪೈಲ್ಸ್ ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು.
ಆದ್ದರಿಂದ ನೆನೆಸಿದ ಬಾದಾಮಿ ಬೇಸಿಗೆಗೆ ಒಳ್ಳೆಯದು. 8 ರಿಂದ 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದ ಬಾದಾಮಿ ತಿನ್ನಬೇಕು. ಹಾಗೆಯೇ ತಿನ್ನಬೇಕು ಎನ್ನುವುದಾದರೆ ಬಾದಾಮಿ ಮೇಲಿನ ಸಿಪ್ಪೆಯನ್ನು ತೆಗೆದು ತಿನ್ನಬೇಕು.