ಪ್ರತಿ ದಿನ ಮುಂಜಾನೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ. ಈ ರೀತಿ ಮಾಡುವುದರಿಂದ ಕಾಯಿಲೆಗಳನ್ನು ದೂರವಿಡಬಹುದಾಗಿದೆ.
ದಿನ ನಿತ್ಯ ಬೆಳಿಗ್ಗೆ ಕಡೇ ಪಕ್ಷ ಮೂರರಿಂದ ನಾಲ್ಕು ಲೋಟ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿನ ಕಲ್ಮಶಗಳು ದೂರವಾಗುತ್ತವಲ್ಲದೇ ಮಲ, ಮೂತ್ರ ವಿಸರ್ಜನೆ ಸರಾಗವಾಗಿ ಆಗುತ್ತದೆ. ರಕ್ತದಲ್ಲಿನ ಟಾಕ್ಸಿನ್ ಹೊರ ಹಾಕಲು ಸಹಾಯಕವಾಗುವ ಮೂಲಕ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.
ಅಲ್ಲದೇ ಹೊಸ ರಕ್ತ ಕಣಗಳು ಉತ್ಪತ್ತಿಯಾಗಲು ಹಾಗೂ ದೇಹ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಎಚ್ಚರಿಕೆ ವಹಿಸಬೇಕಾದ ಅಂಶವೆಂದರೆ ನೀರು ಕುಡಿದಾಕ್ಷಣವೇ ಯಾವುದೇ ಆಹಾರವನ್ನು ಸೇವಿಸಬಾರದು. ಹಾಗೂ ಕಾಫಿ, ಟೀ ಯನ್ನು ವರ್ಜಿಸುವುದೂ ದೇಹಾರೋಗ್ಯಕ್ಕೆ ಒಳ್ಳೆಯದು.