alex Certify ಖಾಲಿ ಹೊಟ್ಟೆಯಲ್ಲೇ ಬಿಸಿನೀರು ಸೇವನೆ ಏಕೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲೇ ಬಿಸಿನೀರು ಸೇವನೆ ಏಕೆ ಗೊತ್ತಾ…..?

ಪ್ರತಿದಿನ  ಬೆಚ್ಚಗಿನ ನೀರು ಕುಡಿಯಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?

ಉತ್ತಮ ಆರೋಗ್ಯ ಹೊಂದಬೇಕಿದ್ದರೆ ನೀವು ದಿನಕ್ಕೆ ಮೂರು ಲೀಟರ್ ನೀರಿ ಕುಡಿಯಲೇ ಬೇಕು. ಅದರಲ್ಲೂ ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶ ದೂರವಾಗುತ್ತದೆ. ಮಲಬದ್ಧತೆ ಸಮಸ್ಯೆ ಇರುವವರಂತೂ ಬೆಳಗ್ಗೆ ಎದ್ದು ಎರಡರಿಂದ ಮೂರು ಲೋಟ ನೀರು ಕುಡಿಯಲೇ ಬೇಕು.

ಬೆಚ್ಚಗಿನ ನೀರು ನಿಮ್ಮ ದೇಹದ ಉಷ್ಣತೆಯನ್ನು ಬೆವರಿನ ರೂಪದಲ್ಲಿ ಹೊರಹಾಕುತ್ತದೆ. ಆಕರ್ಷಕ ತ್ವಚೆ ಹೊಂದಲು ಮತ್ತು ಮೊಡವೆ ಬರದಂತೆ ತಡೆಯಲು ಇದು ಹಲವು ರೀತಿಯಲ್ಲಿ ನೆರವಾಗುತ್ತದೆ

ಜೀರ್ಣ ಸಂಬಂಧಿ ಸಮಸ್ಯೆ ಹಾಗೂ ಗ್ಯಾಸ್ ಟ್ರಬಲ್ ದೂರ ಮಾಡುತ್ತದೆ. ನಿಮಗೆ ದೇಹತೂಕ ಇಳಿಸುವ ಬಯಕೆಯಿದ್ದರೆ ಇದಕ್ಕೆ ಎರಡು ಹನಿ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಿರಿ. ದೇಹವನ್ನು ಮಾಯಿಸ್ಚರೈಸರ್ ಮಾಡುವ ಗುಣವೂ ನೀರಿಗಿದ್ದು, ಸಾಕಷ್ಟು ನೀರು ಕುಡಿಯುವುದರಿಂದ ಡ್ರೈಸ್ಕಿನ್ ಸಮಸ್ಯೆ ಕಾಡದಂತೆ ತಡೆಗಟ್ಟಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...